ಮೈಸೂರು: ಪುಲ್ವಾಮ ದಾಳಿಯಲ್ಲಿ ಹುತಾತ್ಮ ಯೋಧರಿಗೆ ಮ್ಯಾರಥಾನ್ ಫಾರ್ ಮಾರ್ಟಿರ್ಸ್ ಎಸ್ ಎ ಎಂ ವತಿಯಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಗೌರವ ನಮನ ಸಲ್ಲಿಸಿದರು.
ಮೈಸೂರಿನ ಬೆಳವಾಡಿಯಲ್ಲಿ ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳಿಗೆ ತರಬೇತಿ ನೀಡುತ್ತಿರುವ ಸೈನಿಕ್ ಅಕಾಡೆಮಿಯಲ್ಲಿ ವಿವಿಧ ಜಿಲ್ಲೆಗಳಿಂದ ಬಂದು ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು, ಸೇನಾ ಅಭಿಮಾನಿಗಳು, ಎನ್ ಸಿ ಸಿ ಕ್ಯಾಡೆಟ್ ಪರಶುರಾಮ್ ಸೇರಿದಂತೆ, ಉಗ್ರವಾದಿಗಳ ಕುತಂತ್ರಕ್ಕೆ ಬಲಿಯಾದ ಪುಲ್ವಮ ಅಟ್ಯಾಕ್ ನ ಹುತಾತ್ಮ ಯೋಧರು, ಅವರ ಕುಟುಂಬಸ್ಥರಿಗೆ ನಮನ ಸಲ್ಲಿಸುವ ಸಲುವಾಗಿ ಮ್ಯಾರಥಾನ್ ಫಾರ್ ಮಾರ್ಟಿರ್ಸ್ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡರು.
ಮೈಸೂರಿನ ಓವಲ್ ಗ್ರೌಂಡ್ ನಿಂದ ಪ್ರಾರಂಭಿಸಿ, ಹುಣಸೂರು ರಸ್ತೆ, ಮೈಸೂರು ಯೂನಿವರ್ಸಿಟಿ, ಕುಕ್ಕರಳ್ಳಿ ಕೆರೆ ಪುನಃ ಓವಲ್ ಗ್ರೌಂಡ್ ಗೆ ಸೇರುವಂತೆ 7 ಕಿಲೋ ಮೀಟರ್ ರನ್ನಿಂಗ್ ಮತ್ತು 5 ಕಿಲೋ ಮೀಟರ್ ಹುತಾತ್ಮರ ಬ್ಯಾನರ್ ಕೈಯಲ್ಲಿ ಹಿಡಿದು ಘೋಷಣೆಯೊಂದಿಗೆ ವಾಲ್ಕೋಥಾನ್ ನಡೆಸಿದರು.
ಓವಲ್ ಗ್ರೌಂಡ್ ನಲ್ಲಿ ಸುಮಾರು 90 ಕ್ಕೂ ಹೆಚ್ಚು ಜನರು ಸೇರಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಹುತಾತ್ಮರ ಕೃತ್ಯಕ್ಕೆ ಕಾರಣವಾಗಿರುವ ಉಗ್ರವಾದಿಗಳ ಐ ಇ ಡಿ ಅಟ್ಯಾಕ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮಾಜಿ ಕಮಾಂಡೋ ಮತ್ತು ಸೈನಿಕ ಅಕಾಡೆಮಿಯ ಸಂಸ್ಥಾಪಕ ಶ್ರೀಧರ್ ವಿವರಿಸಿದರು.
ನಮ್ಮೆಲ್ಲರಿಗೂ ನಮ್ಮ ದೇಶ ಮೊದಲು ಎಂದು ನುಡಿದರು, ಮತ್ತು ಈ ಕಾರ್ಯಕ್ರಮ ಸುಗಮವಾಗಿ ನಡೆದಿರುವುದಕ್ಕೆ ತಾಯಿ ಚಾಮುಂಡೇಶ್ವರಿಗೆ ಕೃತಜ್ಞತೆ ಸಲ್ಲಿಸಿದರು.
