ಮೈಸೂರು: ಗಣಪತಿ ಸಚ್ಚಿದಾನಂದ ಸ್ವಾಮೀಜಿ ಯವರ ನೇತೃತ್ವದಲ್ಲಿ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಶ್ರೀ ಹನುಮಾನ್ ಚಾಲೀಸ್ ಪಾರಾಯಣ ಮಹಾ ಯಜ್ಞದಲ್ಲಿ ಸ್ಟಾರ್ ದಂಪತಿ ಪುಟ್ಟ ಕಂದನೊಂದಿಗೆ ಬಂದು ಹನುಮನ ಕೃಪೆಗೆ ಪಾತ್ರರಾದರು.
ಚಲನಚಿತ್ರ ನಟ ವಸಿಷ್ಟ ಸಿಂಹ ನಟಿ ಹರಿಪ್ರಿಯ ದಂಪತಿ ತಮ್ಮ ಪುಟ್ಟ ಕಂದನೊಂದಿಗೆ ಆಗಮಿಸಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ನಂತರ ಹನುಮಾನ್ ಚಾಲೀಸ ಪಠಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮಿಗಳು, ಶಾಸಕ ಟಿ ಎಸ್ ಶ್ರೀವತ್ಸ,ಬಿಜೆಪಿ ಮುಖಂಡ ರಾಜೇಂದ್ರ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ ಆರ್ ಸತ್ಯನಾರಾಯಣ್, ಕಡಕೋಳ ಜಗದೀಶ್, ಮುಖಂಡರಾದ ಪ್ರದೀಪ್ ಕುಮಾರ್, ಕೇಬಲ್ ಮಹೇಶ್, ವಿಪ್ರ ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ವಿಕಾಸ್ ಶಾಸ್ತ್ರಿ, ಟಿ ಎಸ್ ಅರುಣ್, ರಾಜಕುಮಾರ್ ಮತ್ತಿತರರು ಹಾಜರಿದ್ದರು.
