ಗದಗ್: 2026 ರ ನವದೆಹಲಿಯ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಕರ್ನಾಟಕ ಮತ್ತು ಗೋವಾ ಎನ್ ಸಿ ಸಿ ಡೈರೆಕ್ಟರೇಟ್ ಪ್ರತಿನಿಧಿಸಿದ ಆಕಾಶ ಗೌಡ ಅವರು ಪ್ರಧಾನ ಮಂತ್ರಿಗಳ ಬ್ಯಾನರನ್ನು ಗೆಲ್ಲುವ ಮೂಲಕ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.
ಅವರಿಗೆ ಕನ್ನಡ ಜಾನಪದ ಪರಿಷತ್ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ ಜಾನಪದ ಎಸ್.ಬಾಲಾಜಿ ತುಂಬು ಹೃದಯ ಅಭಿನಂದನೆ ಸಲ್ಲಿಸಿದ್ದರೆ.
ಆಕಾಶ್ ಗೌಡ ಜೂನ್ 23, 2005ರಂದು, ಗದಗ ಜಿಲ್ಲೆಯ ನಾಗಸಮುದ್ರ ಎಂಬ ಸಣ್ಣ ಹಳ್ಳಿಯಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದರು . ಅವರ ತಂದೆ ಸಿದ್ಧನಗೌಡ ಮತ್ತು ತಾಯಿ ಕಾವೇರಿ.
ಆಕಾಶ್ ಅವರು 1 ನೇ ತರಗತಿಯಿಂದ 7ನೇ ತರಗತಿಯವರೆಗೆ ತಮ್ಮ ಊರಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ್ದಾರೆ.ಶಾಲೆಯ ದಿನಗಳಲ್ಲಿ ಕ್ರೀಡೆ, ವಿದ್ಯಾಭ್ಯಾಸ, ನಾಯಕತ್ವದಲ್ಲಿ ಮುಂದಿದ್ದರು.ಎಲ್ಲದರಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.
5ನೇ ತರಗತಿ ಓದುತ್ತಿರುವಾಗ ಮೂರಾರ್ಜಿ ಪರೀಕ್ಷೆಯಲ್ಲೂ ಸಹ ಉತ್ತೀರ್ಣಹೊಂದಿದ್ದರು. ಆದರೆ ಕಾರಣಾಂತರದಿಂದ ಪ್ರವೇಶ ಪಡೆಯಲಿಲ್ಲ. ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಪ್ರತಿನಿಧಿಯಾಗಿದ್ದರು,ಶಾಲೆಯ ದಿನಗಳಲ್ಲಿ ಪ್ರತಿಭಾ ಕಾರಂಜಿ, ರಸಪ್ರಶ್ನೆ,
ಚಿತ್ರಕಲೆ, ಓದು,ಬರಹ ಮತ್ತು ಕ್ರೀಡೆಯಂತಹ ಇನ್ನೂ ಮುಂತಾದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.
ಗದಗ ನಗರದ ಲೊಯಲಾ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿ, ಎಸ್ ಜೆ ಎ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿದ್ದಾರೆ.
ಪಿ ಯು ಸಿ ಓದುತ್ತಿದ್ದಾಗ ಆದರ್ಶ ವಿದ್ಯಾರ್ಥಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಕಾಲೇಜು ದಿನಗಳಲ್ಲಿಯೇ ನಾಯಕತ್ವ ಹೊಂದಿದ್ದ ಆಕಶ್ ಗೌಡ ಕಾಲೇಜಿನಲ್ಲಿ ಪ್ರಧಾನ ಕಾರ್ಯದರ್ಶಿ ಯಾಗಿದ್ದರು.
ನಂತರ ಎ ಎಸ್ ಎಸ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ಬಿಕಾಂ ಪದವಿಯನ ಅಧ್ಯಯನ ಮಾಡಿದ್ದಾರೆ. ಇದೇ ಸಂಸ್ಥೆಯಲ್ಲಿ 2023 ರಲ್ಲಿ ಎನ್ ಸಿಸಿ ಸೇರಿ,ಎನ್ ಸಿಸಿ ಮೂರನೇ ವರ್ಷದಲ್ಲಿ ಆರು ತಿಂಗಳ ನಿರಂತರ ತರಬೇತಿ ಪಡೆದರು.
ದೆಹಲಿಯಲ್ಲಿ ನಡೆದ ಪ್ರತಿಷ್ಠಿತ 2026 ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶಾಲಯದಿಂದ 124 ಕ್ಯಾಡೆಟ್ಸ ಭಾಗವಹಿಸಿದ್ದರು.ಆಕಾಶ್ ಪ್ರೈಮ್ ಮಿನಿಸ್ಟರ್ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಕರ್ನಾಟಕ ಮತ್ತು ಗೋವಾ ನಿರ್ದೇಶಾಲಯ ಈ ವರ್ಷ ಚಾಂಪಿಯನ್ಸ್ ನಿರ್ದೇಶಾಲಯವಾಗಿದೆ. ಗದಗ್ ಜಿಲ್ಲೆಯ 38 ಕರ್ನಾಟಕ ಬೆಟಾಲಿಯನ್ ನ ಎನ್ ಸಿಸಿ ಕೆಡೆಟ್.
ತಮ್ಮ ಊರಿನಿಂದ NCC ಯಲ್ಲಿ ಪ್ರತಿಷ್ಠಿತ ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾದವರು ಆಕಾಶ್ ಅವರೇ ಮೊದಲಿಗರು.
2026 ರ ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾಗುವ ಮೂಲಕ ಕರ್ನಾಟಕ, ಗದಗ ಹಾಗೂ ಅವರ ಊರಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
