ಮೈಸೂರು: ಲ್ಯಾಂಡ್ ಲಾರ್ಡ್ ಚಿತ್ರತಂಡದವರು ಮಂಗಳಮುಖಿ ಯರೊಂದಿಗೆ ಚಿತ್ರ ವೀಕ್ಷಿಸಿ ಮಾದರಿಯಾಗಿದ್ದಾರೆ.
ಶನಿವಾರ ಮಧ್ಯಾಹ್ನ ಮೈಸೂರಿನ ಗಾಯತ್ರಿ ಚಿತ್ರಮಂದಿರದಲ್ಲಿ ಲ್ಯಾಂಡ್ ಲಾರ್ಡ್ ಚಿತ್ರ ವೀಕ್ಷಿಸಿದರು.
ಚಲನ ಚಿತ್ರ ವೀಕ್ಷಣೆಗೂ ಮುನ್ನ
ಮಧ್ಯಾಹ್ನ 1 ಗಂಟೆಗೆ ಗಾಯತ್ರಿ ಚಲನಚಿತ್ರ ಮಂದಿರದಲ್ಲಿ ವಿಶೇಷ ವಾಗಿ ನೂರಾರು ಜನ
ಮಂಗಳ ಮುಖಿಯವರಿಂದ ವಿಶೇಷ ಪೂಜೆ ಮಾಡುವ ಮೂಲಕ ಲ್ಯಾಂಡ್ ಲಾರ್ಡ್ ಚಿತ್ರಕ್ಕೆ ಶುಭ ಹಾರೈಸಿದರು.
ನೂರಾರು ಮಂಗಳ ಮುಖಿಯರು ದುನಿಯಾ ವಿಜಿಯವರ ಭಾವಚಿತ್ರ ಇಟ್ಟು ಅದಕ್ಕೆ ಕುಂಬಳಕಾಯಿ ಒಡೆದು ದೃಷ್ಟಿ ತೆಗೆದರು. ಈ ಚಲನಚಿತ್ರವು ಶತದಿನೋತ್ಸವ ಆಚರಿಸಲೆಂದು ಶುಭ ಹಾರೈಸಿದರು ನಂತರ ಚಲನಚಿತ್ರ ವನ್ನು ವೀಕ್ಷಿಸಿ ಖುಷಿ ಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಮಂಗಳ ಮುಖಿಯರ ರಾಜ್ಯ ಸಮಿತಿ ಸದಸ್ಯರಾದ ಪ್ರಣತಿ ನಮ್ಮೆಲ್ಲರಿಗೂ ಸಮಾನತೆ ಬೇಕು ಈ ಚಲನಚಿತ್ರದಲ್ಲಿ ಡಾ.ಬಿ.ಅರ್.ಅಂಬೇಡ್ಕರ್ ಅವರ ವಿಚಾರವು ಹೆಚ್ಚು ಇದ್ದು ನಮ್ಮಂತಹ ಮಂಗಳಮುಖಿಯವರ ಪರವಾದ ಚಿತ್ರವಾಗಿರುತ್ತದೆ. ಅದರಲ್ಲೂ ದುನಿಯಾ ವಿಜಯ್ ಅವರ ನಟನೆ ಅದ್ಬುತ ವಾಗಿದೆ ಇನ್ನು ತಂದೆ ಮತ್ತು ಮಗಳ ಸಂಬಂಧವನ್ನು ಅರ್ಥಪೂರ್ಣವಾಗಿ ನಿರ್ದೇಶಕ ರಾದ ಜಡೇಶ್ ರವರು ಚಿತ್ರೀಕರಿಸಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಅಧ್ಯಕ್ಷ ಶಿವರಾಮ್, ಅಮೃತ,ಅನುಷ್ಕಾ, ಮಂಜಿ,ಕೆಂಡಗಣ್ಣ ಸ್ವಾಮಿ,ಮರಿಸ್ವಾಮಿ,ಪ್ರಾರ್ಥನಾ, ಚಂದನ,ಜಾನು,ಪದ್ಮ,ಅಂಕಿತಾ,ಹರೀಣಿ,ಹೇಮಾ,ಚಿತ್ರ,ಸಾಗರಿ ಮುಂತಾದವರು ಹಾಜರಿದ್ದರು.
