ಉಕ್ರೇನ್, ಫೆ.2: ಉಕ್ರೇನ್ ಮೇಲೆ ರಷ್ಯಾ ಡ್ರೋನ್ ದಾಳಿ ನಡೆಸಿದ್ದು,15 ಮಂದಿ ಬಲಿಯಾಗಿದ್ದಾರೆ.
ಗಣಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಖಾಸಗಿ ಕಂಪನಿಯ ಬಸ್ ಅನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.
ಪಾವ್ಲೋಹ್ರಾದ್ ಜಿಲ್ಲೆಯ ಡಿಟಿಇಕೆ ಕಲ್ಲಿದ್ದಲು ಸ್ಥಾವರದ ಬಳಿ ಈ ದಾಳಿ ನಡೆದಿದೆ. ಬಸ್ ಗಣಿಗಾರರನ್ನು ತಮ್ಮ ಕರ್ತವ್ಯಕ್ಕೆ ಕರೆದೊಯ್ಯುತ್ತಿದ್ದಾಗ ರಷ್ಯ ದಾಳಿ ಮಾಡಿದೆ.
ಈ ದಾಳಿಯಲ್ಲಿ 15 ಜನ ಮೃತರಾಗಿದ್ದಾರೆ, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಡ್ರೋನ್ ದಾಳಿಯ ನಂತರ ಬಸ್ ಗೆ ಬೆಂಕಿ ತಗುಲಿ ಧಗಧಗನೆ ಉರಿಯುತ್ತಿತ್ತು.ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಘಟನೆ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
