ಮೈಸೂರು: ಸಂಗೊಳ್ಳಿ ರಾಯಣ್ಣನ ದೇಶಪ್ರೇಮ, ಆದರ್ಶ,ತತ್ವ, ಸಂದೇಶಗಳು ಇಂದಿನ ಯುವ ಜನಾಂಗಕ್ಕೆ ಪ್ರೇರಕ ಶಕ್ತಿಯಾಗಬೇಕು ಎಂದು ಶಾಸಕ ಹರೀಶ್ ಗೌಡ ಹೇಳಿದರು.
ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆ, ಸದ್ವಿದ್ಯಾ ಶಾಲೆಯ ವೃತದಲ್ಲಿ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಲಿದಾನ ದಿವಸ್ ಅಂಗವಾಗಿ ರಾಯಣ್ಣ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು
ಮಾತನಾಡಿದರು.
ಬ್ರಿಟೀಷರ ಕುಟಿಲ ನೀತಿ ವಿರುದ್ಧ ಯುವ ಸೇನೆ ಕಟ್ಟಿ ಹೋರಾಡಿ, ಪ್ರಾಣವನ್ನೇ ಬಲಿಕೊಟ್ಟ ರಾಯಣ್ಣನ ಜನ್ಮದಿನ ಆಚರಿಸುವುದು ಅವಶ್ಯಕ ಎಂದು ಹೇಳಿದರು.
ತ್ಯಾಗ, ಬಲಿದಾನಕ್ಕೆ ಮತ್ತೊಂದು ಹೆಸರೇ ರಾಯಣ್ಣ. ಇಂತಹ ಮಹನೀಯರ ಬಗ್ಗೆ ಯುವ ಜನಾಂಗ ಅರಿತು ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದು ಶಾಸಕರು ಸಲಹೆ ನೀಡಿದರು.
ಸಂಗೊಳ್ಳಿ ರಾಯಣ್ಣ ಸಮುದಾಯದ ಎಲ್ಲ ವರ್ಗಗಳ ಜನರನ್ನು ಒಟ್ಟುಗೂಡಿಸಿ, ಯುವಸೈನ್ಯ ಕಟ್ಟಿ ಬ್ರಿಟೀಷರ ವಿರುದ್ಧ ರಣ ಕಹಳೆಯನ್ನೂದಿದ ವೀರಯೋಧ. ಕಿತ್ತೂರು ರಾಣಿ ಚೆನ್ನಮ್ಮನ ಪರಮ ಬಂಟನಾಗಿ, ಪರಕೀಯರ ವಿರುದ್ಧ ಹೋರಾಡಿದವರು’
ವಿದ್ಯಾರ್ಥಿಗಳು ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು
ದೇಶದ ಶಕ್ತಿಯಾದ ವಿದ್ಯಾರ್ಥಿಗಳು ದೇಶಸೇವೆ ಮಾಡಲು ಮುಂದಾಗಬೇಕು ಎಂದು ಹರೀಶ್ ಗೌಡ ಕಿವಿಮಾತು ಹೇಳಿದರು.
ಉದ್ಯಮಿಗಳಾದ ವಕ್ತಾರಾಮ್, ಹಿರಿಯ ಮುಖಂಡರಾದ ಮಹದೇವ್, ಕನಕದಾಸ ಪತ್ತಿನ ಸಹಕಾರ ಸಂಘದ ನಿರ್ದೇಶಕ ರವಿಚಂದ್ರ, ಸಂದೀಪ್, ನವೀನ್, ಮಂಜುನಾಥ್,ಎಸ್ ಎನ್ ರಾಜೇಶ,ನಂಜುಂಡಸ್ವಾಮಿ, ಹರೀಶ್ ಗೌಡ, ಗೋಲ್ಡ್ ಶ್ರೀನಿವಾಸ್, ಬಬುತಾ ರಾಮ, ಯೋಗೇಶ್ ಯಾದವ,ಮಂಜುಳಾ, ಶಾಂತ, ಮಂಗಳ, ಸುರೇಶ್, ಹೇಮಂತ, ಲೋಕೇಶ್, ಶ್ರೀಕಾಂತ್ ಪಾಪು ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
