ಮೈಸೂರು: ಮೈಸೂರಿನ ಕುಂಬಾರಕೊಪ್ಪಲು, ಶ್ರೀ ಮಹಾದೇಶ್ವರ ದೇವಸ್ಥಾನದಲ್ಲಿ ಗೋಕುಲಂ ನಗರ ವ್ಯಾಪ್ತಿಯ
ಹಿಂದೂ ಸಮಾಜೋತ್ಸವ ಜರುಗಿತು.
ಬಸವನಗುಡಿ ದೇವಸ್ಥಾನದಿಂದ ಭಾರತ ಮಾತಾ ಭಾವಚಿತ್ರವನ್ನು ಎತ್ತಿನಗಾಡಿಯ ಮೇಲೆ ಮಂಗಳವಾದ್ಯ, ನೂರಾರು ಕಳಶ ಹೊತ್ತ ಸುಮಂಗಲಿಯರು, ಚಂಡೆ ವಾದ್ಯ ಹಾಗೂ ತಮಟೆ ಯೊಂದಿಗೆ ಶೋಭಾಯಾತ್ರೆ ಮೂಲಕ ಸಮಾರಂಭದ ಜಾಗಕ್ಕೆ ಉತ್ಸವವನ್ನು ವಿಜೃಂಭಣೆಯಿಂದ ಬರಮಾಡಿ
ಕೊಳ್ಳಲಾಯಿತು.
ಜನತೆ ಶೋಭಾಯಾತ್ರೆ ಸಾಗುವ ದಾರಿ ಉದ್ದಕ್ಕೂ ತಮ್ಮ ತಮ್ಮ ಮನೆಯ ಮುಂದೆ ರಂಗೋಲಿ ಹಾಕಿ, ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಈ ವೇಲಕೆ ನೃತ್ಯ ವರ್ಣ ಕಲಾ ಸೌರಭ ಮಕ್ಕಳಿಂದ ಭರತನಾಟ್ಯ ಹಾಗೂ ಮೈಂಡ್ ಅಂಡ್ ಬಾಡಿ ತಂಡದಿಂದ ಯೋಗ ಪ್ರದರ್ಶನ ಎಲ್ಲರ ಮನಸ್ಸನ್ನು ಗೆದ್ದಿತು.
ಸಾಮಾಜಿಕ ಕಾರ್ಯಕರ್ತರಾದ ಸುಧಾ ಮುರಳಿ ಪ್ರಾಸ್ತಾವಿಕ ಭಾಷಣ ಮಾಡಿದರು. ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಯವರು ಆಶೀರ್ವಚನ, ಶ್ರೀ ಮನೋಹರ ಮಠದ್, ದಿಕ್ಸೂಚಿ ಭಾಷಣ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೇಂಬರ್ಸ್ ಆಫ್ ಕಾಮರ್ಸ್ ಮೈಸೂರು ಅಧ್ಯಕ್ಷ
ಕೆ. ಬಿ .ಲಿಂಗರಾಜು ವಹಿಸಿದ್ದರು. ಪದ್ಮ ಕಾರ್ಯಕ್ರಮವನ್ನು ನಿರ್ವಹಿಸಿದರು, ಶ್ರೀ ಹರೀಶ್ ಶೆಟ್ಟಿ ಅವರು ಧನ್ಯವಾದ ಸಮರ್ಪಣೆ ಮಾಡಿದರು.
ಕಾರ್ಯಕ್ರಮದ ನಂತರ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
