ಮೈಸೂರು: ಅಪಾರ್ಟ್ಮೆಂಟ್ ನಲ್ಲಿ ಬಣ್ಣ ಹೊಡೆಯುವ ವೇಳೆ ಕಾಲು ಜಾರಿ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ಮೈಸೂರಿನ ದಿವಾನ್ಸ್ ರಸ್ತೆಯಲ್ಲಿ ನಡೆದಿದೆ.
ಕ್ಯಾತಮಾರನಹಳ್ಳಿ ನಿವಾಸಿ ಸತೀಶ್ ಸಾವನ್ನಪ್ಪಿದ ಕಾರ್ಮಿಕ.
ಬಣ್ಣ ಹೊಡೆಯುವ ವೇಳೆ ಆಕಸ್ಮಿಕವಾಗಿ ಸತೀಶ್ ಕೆಳಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಲಕ್ಷ್ಮೀಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸತೀಶ್ನನ್ನು ಕಂಟ್ರಾಕ್ಟರ್ ದೀಪಕ್ ಎಂಬಾತ ಬಣ್ಣ ಹೊಡೆಯಲು ಕರೆದುಕೊಂಡು ಹೋಗಿದ್ದ, ಸತೀಶನ ಸಾವಿಗೆ ದೀಪಕನೆ ಕಾರಣ ಎಂದು ಮೃತನ ಕುಟುಂಬದ ವರು ಗಂಭೀರ ಆರೋಪ ಮಾಡಿದ್ದಾರೆ.
