ಮೈಸೂರು: ಡಾ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಹಿತರಕ್ಷಣ ಸಂಘದ ವತಿಯಿಂದ
ಹೂಟಗಳ್ಳಿ ಎನ್ ಹೆಚ್ ಬಿ ಕಾಲೋನಿಯಲ್ಲಿ
ಪದ್ಮಭೂಷಣ,ಕರ್ನಾಟಕ ರತ್ನ, ತ್ರಿವಿಧ ದಾಸೋಹಿಗಳು, ಪರಮಪೂಜ್ಯರಾದ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ
7ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಆಚರಿಸಲಾಯಿತು.
ಈ ವೇಳೆ ಅನ್ನ ದಾಸೋಹ ಕಾರ್ಯಕ್ರಮ ಕೂಡಾ ಏರ್ಪಡಿಸಲಾಗಿತ್ತು ನೂರಾರು ಮಂದಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಹಿತರಕ್ಷಣ ಸಂಘದ ಅಧ್ಯಕ್ಷ ಲೋಕೇಶ್ ಚಿನ್ನಬುದಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಹಾಗೂ ಶ್ರೀ ಶಿವಕುಮಾರ ಸ್ವಾಮಿಗಳ ಹಿತರಕ್ಷಣಾ ಸಂಘದ ನಿರ್ದೇಶಕ ರಾಜಶೇಖರ್, ಉಪಾಧ್ಯಕ್ಷರಾದ ಕುಂಟಬಸಪ್ಪ, ಪ್ರಧಾನ ಕಾರ್ಯದರ್ಶಿ ಅಂಧಾನಪ್ಪ, ಖಜಾಂಜಿ ಶಿವಕುಮಾರ್, ನಿರ್ದೇಶಕರಾದ ಕಾಯಿ ಶಿವಣ್ಣ, ಶ್ರೀಧರ್, ರವಿಕುಮಾರ್, ಶಿವ ಮಲ್ಲು , ಮಿಲ್ಟ್ರಿ ನಾಗರಾಜ್, ಜಗದೀಶ್, ಸತೀಶ್, ಲಿಂಗರಾಜಪ್ಪ , ಮಹದೇವಪ್ಪ , ರಾಜಕುಮಾರ್ ಎಲ್ಐಸಿ, ರೇಣುಕಾ ರುದ್ರೇಶ್, ಮಂಜುನಾಥ್, ಪ್ರಕಾಶ್ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.
