ಮೈಸೂರು: 2026-27ನೇ ಶೈಕ್ಷಣಿಕ ಸಾಲಿಗೆ
ಪದವಿ ಪ್ರವೇಶಾತಿ ಹೆಚ್ಚಳ ಮಾಡುವ ಸಲುವಾಗಿ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಪ್ರವೇಶಾತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಪ್ರವೇಶಾತಿ ಅಭಿಯಾನದ ಅಂಗವಾಗಿ
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು (ಸ್ವಾಯತ್ತ)ಬುಧವಾರ ಪ್ರವೇಶಾತಿ ಅಭಿಯಾನ ಆರಂಭಿಸಿತು.
ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು ನಗರದ ವಿವಿಧ ಪದವಿ ಪೂರ್ವ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪ್ರವೇಶ ಮಾಹಿತಿ ನೀಡಿದರು.
ಮಹಾರಾಣಿ ಪದವಿ ಪೂರ್ವ ಕಾಲೇಜು, ಚಾಮರಾಜ ಜೋಡಿ ರಸ್ತೆಯಲ್ಲಿರುವ ಪದವಿ ಪೂರ್ವ ಕಾಲೇಜು, ಡಿ ದೇವರಾಜ ಅರಸು ಪದವಿ ಪೂರ್ವ ಕಾಲೇಜು ಮತ್ತು ಪೀಪಲ್ಸ್ ಪಾರ್ಕ್ ಪದವಿ ಪೂರ್ವ ಕಾಲೇಜುಗಳಿಗೆ ಭೇಟಿ ನೀಡಿದ ಪ್ರವೇಶಾತಿ ಸಮಿತಿಯ ಸದಸ್ಯರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ದೊರೆಯುವ ಸೌಲಭ್ಯಗಳು ಮತ್ತು ಲಭ್ಯವಿರುವ ಕೋರ್ಸುಗಳು ಹಾಗೂ ಸರ್ಕಾರದಿಂದ ದೊರೆಯುವ ವಿದ್ಯಾರ್ಥಿ ವೇತನ, ವಿದ್ಯಾರ್ಥಿನಿಲಯ ಹಾಗೂ ಇನ್ನಿತರ ಸೌಲಭ್ಯಗಳ ಕುರಿತು ವಿವರವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಿದರು.
ಬಿಎಸ್ಸಿ ಯಲ್ಲಿ 27 ಐಚ್ಚಿಕ ವಿಷಯಗಳು
ಮತ್ತು ಬಿಸಿಎ ಕಾಂಬಿನೇಷನ್ ಗಳ ಬಗ್ಗೆ ವಿವರ ನೀಡಿದರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಪ್ರವೇಶಾತಿ ಸಮಿತಿಯ ಅಧ್ಯಕ್ಷರಾದ ಕಾಲೇಜಿನ ಪ್ರಾಂಶುಪಾಲ ಡಾ.ಅಬ್ದುಲ್ ರಹಿಮಾನ್ ಎಂ, ಸಂಚಾಲಕ ಡಾ. ಕೆ ಎಲ್ ರಮೇಶ, ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಡಾ. ಸುಧಾ ಎಂ.ಸಿ, ಡಾ. ಲೀಲಾವತಿ ಎನ್ ಕೆ, ಡಾ. ಎಚ್. ಜೆ. ಭೀಮೇಶ್, ಗೋವಿಂದರಾಜು, ಡಾ. ರಾಮಚಂದ್ರ, ಡಾ. ಚೇತನ್ ಮಲಗಾವಿ, ಚೇತನ್ ಹಂಜಿ, ಡಾ.ವಾಸುದೇವ ಶೆಟ್ಟಿ, ರಶ್ಮಿ ಪಿ ಇ, ಡಾ.ಪ್ರೀತಿ ಎಮ್ ತಲ್ಲೂರ, ಡಾ. ಲತಾ ಕೆ, ಡಾ. ಅನಿಲ್ ಕುಮಾರ್ ಆರ್.ಸಿ,
ನಟರಾಜು ಬಿಟಿ, ರಮ್ಯಾ ಮತ್ತಿರರು ಹಾಜರಿದ್ದರು.
