ಮೈಸೂರು: ತಿಂಥಣಿ ಸೇತುವೆ ಕೃಷ್ಣಾ ನದಿ ದಂಡೆಯ ಮೇಲಿರುವ ಕನಕ ಗುರು ಪೀಠದ ಪೀಠಾಧಿಪತಿಗಳಾದ ಶ್ರೀ ಸಿದ್ದ ರಾಮಾನಂದಪುರಿ ಸ್ವಾಮಿಜಿ ಲಿಂಗೈಕ್ಯರಾಗಿದ್ದು,ಮೈಸೂರಿನಲ್ಲಿ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಯಿತು.
ಶ್ರದ್ಧಾಂಜಲಿ ಸಭೆಯು ಕೆ ಆರ್ ಬ್ಯಾಂಕ್ ಅಧ್ಯಕ್ಷರಾದ ಬಸವಾರಾಜು ಬಸಪ್ಪ ಅವರ ನೇತೃತ್ವದಲ್ಲಿ ನಡೆದು, ಮಹೇಂದ್ರ ಕಾಗಿನೆಲೆ, ಬಸವರಾಜ್, ಕೃಷ್ಣಪ್ಪ, ( ಗಂಠಯ್ಯ )ನಾಡನಹಳ್ಳಿ ರವಿ, ದೊಳ್ಳೆಗೌಡ್ರು, ಅಪ್ಪು ಗೌಡ್ರು, ಹರೀಶ್, ಮೊಗಣ್ಣ, ಜಯಲಕ್ಷ್ಮಿ, ಪೈಲ್ವಾನ್ ಬೀರೇಶ್ ಮುಂತಾದದವರೊಂದಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಶ್ರೀ ಸಿದ್ದ ರಾಮಾನಂದಪುರಿ ಸ್ವಾಮಿಜಿ ಅವರ ಕೆಲಸ ಕಾರ್ಯಗಳನ್ನು ಶ್ರದ್ಧಾಂಜಲಿ ಸಭೆಯಲ್ಲಿ ಸ್ಮರಿಸಲಾಯಿತು.
