ಮೈಸೂರು: ಕೃಷ್ಣರಾಜ ಯುವ ಬಳಗದ ವತಿಯಿಂದ ಮೈಸೂರಿನ ಸಿಟಿ ಬಸ್ ನಿಲ್ದಾಣದಲ್ಲಿ ಸಿದ್ದರಾಮಯ್ಯ ದೀರ್ಘಾವಧಿ ಸಿಎಂ ಹಿನ್ನೆಲೆಯಲ್ಲಿ ಅಭಿಮಾನಿಗಳು ಮೈಸೂರುಪಾಕ್ ವಿತರಿಸಿ ಸಂಭ್ರಮಿಸಿದರು.
ಸಿದ್ದರಾಮಯ್ಯನವರ ಭಾವಚಿತ್ರ ಹಿಡಿದು ಪಂಚ ಗ್ಯಾರಂಟಿಯಲ್ಲಿ ಪ್ರಮುಖ ಗ್ಯಾರಂಟಿ ಶಕ್ತಿ ಯೋಜನೆ ಸದ್ಬಳಕೆ ಮಾಡಿಕೊಳ್ಳುತ್ತಿರುವ ಮಹಿಳೆಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಧನೆಯ ಬಗ್ಗೆ ತಿಳಿಸಿ ಮೈಸೂರ್ ಪಾಕ್ ವಿತರಿಸಿ
ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್ ಎನ್
ರಾಜೇಶ್, ಕೃಷ್ಣರಾಜ ಯುವ ಬಳಗದ ಅಧ್ಯಕ್ಷ ನವೀನ್ ಕೆಂಪಿ,ಕನಕಪತ್ತಿನ ಸಹಕಾರಿ ಸಂಘದ ನಿರ್ದೇಶಕ ರವಿಚಂದ್ರ,ರಾಕೇಶ್, ದುರ್ಗಾ ಪ್ರಸಾದ್, ರವೀನಂದನ್,ವಿನಯ್ ಕುಮಾರ್,ಹೇಮಂತ್, ರಾಜು ಮತ್ತಿತರರು ಹಾಜರಿದ್ದರು.
