ಮಂಗಳೂರು: ಕಥಾಬಿಂದು ಸಾಹಿತ್ಯ ಸಂಭ್ರಮ 2026 ಕಾರ್ಯಕ್ರಮದ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಶಂಕರ ಪುರ ನಿವಾಸಿ ಸಾಹಿತಿ ನೀಮಲೋಬೋ ಬರೆದಿರುವ “ಕನಸ್ಸೇ ಥ್ಯಾಂಕ್ಯು” ಕಥಾ ಸಂಕಲನ ಬಿಡುಗಡೆ ಮಾಡಲಾಯಿತು.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್, ಕಥಾ ಬಿಂದು ಪ್ರಕಾಶನ ಮಂಗಳೂರು ಅಂತರರಾಷ್ಟ್ರೀಯ ಜೇಸಿಸ್, ಭಯಂಕೇಶ್ವರ ದೇವಸ್ಥಾನ ಪಾಣೆ ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಕಥಾಬಿಂದು ಸಾಹಿತ್ಯ ಸಂಭ್ರಮ ನಡೆಯಿತು.
ಇದೇ ವೇಳೆ ಸಾಹಿತಿ ನೀಮಲೋಬೋ ಬರೆದಿರುವ ಕನಸ್ಸೇ ಥ್ಯಾಂಕ್ಯು ಕಥಾ ಸಂಕಲನ ಬಿಡುಗಡೆ ಸಂಭ್ರಮದಿಂದ ಗಣ್ಯರ ಸಮ್ಮುಖದಲ್ಲಿ ನೆರವೇರಿತು.
ನೀಮಾಲೋಬೋ ಕೇವಲ ಸಾಹಿತಿ ಅಲ್ಲದೆ ಹತ್ತು ಹಲವು ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ಹೆಜ್ಜೆ ರಕ್ತದಾನಿ ಬಳಗ ಉಡುಪಿ ಜಿಲ್ಲೆಯ ಅಧ್ಯಕ್ಷರಾಗಿ ಹಾಗೂ “ಸರ್ವಕಲಾ ಸೇವಾ ಟ್ರಸ್ಟ್” ಸ್ಥಾಪಕ ಅಧ್ಯಕ್ಷರಾಗಿಯೂ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
