ಮಂಗಳೂರು: ಮಂಗಳೂರಿನಲ್ಲಿ ನಡೆದ ಕಥಾ ಬಿಂದು ಸಾಹಿತ್ಯ ಸಂಭ್ರಮ 2026 ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಕನ್ನಡ ರತ್ನ ಪ್ರಶಸ್ತಿಯನ್ನು ಸಾಧಕರಿಗೆ ವಿತರಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಉಡುಪಿಯ ಕೃಷಿ ತಜ್ಞರು ಹಾಗೂ ಸರ್ವಕಲ ಸೇವಾ ಟ್ರಸ್ಟ್ ಕಾರ್ಯದರ್ಶಿಯಾದ ಡಾ.ಜೋಸೆಫ್ ಲೋಬೊ, ಮೈಸೂರಿನ ಪಂಚಾಯತ್ ಗ್ರಾಮ ಅಭಿವೃದ್ಧಿ ಮತ್ತು ರೈತರ ಸೇವಾ ಸಮಿತಿ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನ ಆಶ್ರಮದ ಅಧ್ಯಕ್ಷರಾದ ಯಾದವ ಹರೀಶ್ ಹೆಚ್. ಎ., ಮೈಸೂರಿನ ಒಂದು ಹೆಜ್ಜೆ ರಕ್ತದಾನ ಬಳಗದ ಅಧ್ಯಕ್ಷರು ಹಾಗೂ ಪಿಜಿಆರ್ ಎಸ್ ಎಸ್ ಸಂಸ್ಥೆಯ ರಾಜ್ಯ ಸಂಚಲಕರಾದ ರಕ್ತದಾನಿ ಮಂಜು, ಅನಿಲ್ , ಕುಮಾರಿ ಅನಾರ್ಯ ಎಸ್ ಬಟ್ಟೆ ವರುಗಳಿಗೆ ರಾಜ್ಯಮಟ್ಟದ ಕನ್ನಡ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
