ಮೈಸೂರು: ಭಾರತೀಯ ವಾಯು ಸೇನೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಸೈನಿಕ ಅಕಾಡೆಮಿ ಮೈಸೂರಿನಲ್ಲಿ ಅದ್ದೂರಿ ಗೌರವ ಸನ್ಮಾನ ಮಾಡಿತು.
ಮೈಸೂರಿನ ಬೆಳವಾಡಿಯಲ್ಲಿ ರಕ್ಷಣಾ ಇಲಾಖೆಗೆ ಸೇರಲು ಬಯಸುವ ಅಭ್ಯರ್ಥಿಗಳಿಗೆ ಶಾರೀರಿಕ ಮತ್ತು ಲಿಖಿತ ಪರೀಕ್ಷಗೆ ತರಬೇತಿಯನ್ನು ನೀಡುವ ವಸತಿಪರ ತರಬೇತಿ ಕೇಂದ್ರ ಮಾಜಿ ಎನ್ ಎಸ್ ಜಿ ಕಮಾಂಡೋ ಅವರ ಮಾರ್ಗದರ್ಶನದಲ್ಲಿ ಕಳೆದ 6 ವರ್ಷಗಳಿಂದ ನಡೆಯುತ್ತಿದೆ.
ಇಲ್ಲಿಯವರೆಗೆ 372 ಆಕಾಂಕ್ಷೆಗಳು ಆಯ್ಕೆ ಆಗಿ ಭಾರತಾಂಬೆಯ ಸೇವೆ ಸಲ್ಲಿಸುತ್ತಿದ್ದಾರೆ, ಹಾಗೆಯೇ ಭಾರತೀಯ ವಾಯು ಸೇನೆಗೆ ದರ್ಶನ ಪಿ (ಕೊಡಗು), ದರ್ಶನ್ ಹೆಚ್ ಪಿ (ಚಾಮರಾಜನಗರ) ಮತ್ತು ಲಾವಣ್ಯ (ಬೆಂಗಳೂರು) ಆಯ್ಕೆ ಆಗಿರುವುದು ಹೆಮ್ಮೆಯ ಸಂಗತಿ.
ಕೆಲವು ವರ್ಷಗಳ ಹಿಂದೆ ಗಂಡು ಮಕ್ಕಳೇ ಸೇನೆ ಸೇರಲು ಭಯ ಪಡುತಿದ್ದರು ಆದರೆ ಈಗ ಎನ್ ಎಸ್ ಜಿ ಕಮಾಂಡೋ ಶ್ರೀಧರ ಸಿ ಎಂ ಅವರ ಮಾರ್ಗದರ್ಶನದಲ್ಲಿ, ದೇಶ ಭಕ್ತಿ ಹೆಚ್ಚಿದೆ.
ಗಂಡು ಮಕ್ಕಳೇ ಅಲ್ಲ ಹೆಣ್ಣು ಮಕ್ಕಳು ಕೂಡ ದೇಶ ಸೇವೆಗೆ ನಿಸ್ವಾರ್ಥದಿಂದ ಆಯ್ಕೆ ಆಗಿತ್ತಿರುವುದು ಎಲ್ಲರಿಗೂ ಸ್ಫೂರ್ತಿಯಾಗಿದೆ ಇಂತಹ ಧೈರ್ಯಶಾಲಿ ಮಕ್ಕಳನ್ನು ಸನ್ಮಾನಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸೈನಿಕ ಅಕಾಡೆಮಿಯಲ್ಲಿ ಅಭಿನಂದಿಸಿ ಸನ್ಮಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತಿ ಎನ್ ಎಸ್ ಜಿ ಕಮಾಂಡೋ ಮತ್ತು ಸೈನಿಕ ಅಕಾಡೆಮಿ ಸಂಸ್ಥಾಪಕರು ಶ್ರೀಧರ ಸಿ ಎಂ, ಸಹ ಸಂಸ್ಥಾಪಕಿ ಅನಿತಾ ಎನ್ ಎಂ, ಸಿಬ್ಬಂದಿಗಳಾದ ನಿಂಗರಾಜು, ನೇತ್ರಾ, ತೇಜು ಲಿಂಗೇಗೌಡ, ಜನನಿ, ಹೇಮಂತ್, ಸಿಂಗ್ರಿ ಗೌಡ, ಭುವನೇಶ್ವರಿ, ಕಶಿಶ್ ಗೌಡ, ಪ್ರಶಾಂತ್, ಮನೋಜ್, ಕಾರ್ತಿಕ್, ಯೋಗಿತಗೌಡ, ಪ್ರಕಾಶ ಎನ್, ತೃಪ್ತಿ, ದೃಶ್ಯ ಮತ್ತಿತರರು ಹಾಗೂ ಮಕ್ಕಳ ಪೋಷಕರು ಹಾಜರಿದ್ದರು.
