ಮೈಸೂರು: ದೇಶದ ಸ್ವಾತಂತ್ರ್ಯಕ್ಕಾಗಿ ನೆಹರು
ಅವರು ಹುಟ್ಟು ಹಾಕಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದಂತೆ ಸತ್ಯಾಂಶ ಇಲ್ಲದೇ ಪ್ರಕರಣ ದಾಖಲು ಮಾಡಿರುವುದು ಖಂಡನೀಯ ಎಂದು ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷರಾದ ರವಿ ಮಂಚೇಗೌಡನ ಕೊಪ್ಪಲು
ಹೇಳಿದ್ದಾರೆ.
ಈ ಸಂಬಂಧ ಆರೋಪ ಪಟ್ಟಿಯನ್ನೆ ನ್ಯಾಯಾಲಯ ತೀರಸ್ಕಾರ ಮಾಡುವ ಮೂಲಕ ಸತ್ಯಕ್ಕೆ ಜಯ ಸಿಕ್ಕಿದಂತಾಗಿದೆ, ಈ ಮೂಲಕ ಬಿಜೆಪಿ ಪಿತೂರಿ ಬಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, 1937 ರಲ್ಲಿ ನೆಹರು ಅವರು ಈ ಪತ್ರಿಕೆ ಹುಟ್ಟು ಹಾಕಿದ್ದರು. ನಂತರ ಯಂಗ್ ಇಂಡಿಯಾ ಸ್ವಾಮ್ಯಕ್ಕೆ ಒಳಪಟ್ಟಿತು. ಸುಖಾಸುಮ್ಮನೇ ಬಿಜೆಪಿ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಇಡಿ ತನಿಖೆ ಮಾಡಿಸಿತು ಎಂದು ದೂರಿದ್ದಾರೆ.
ಈಗ ತನಿಖಾ ಸಂಸ್ಥೆ ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ಕೋರ್ಟ್ ತಿರಸ್ಕಾರ ಮಾಡಿದೆ. ಸುಖಾ ಸುಮ್ಮನೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ತೇಜೋವಧೆ ಮಾಡಿದ್ದಾರೆ. ಬಿಜೆಪಿ ಅಧಿಕಾರ ದುರುಪಯೋಗ ದೇಶಕ್ಕೆ ಗೊತ್ತಾಗಿದೆ, ಕೊನೆಗೂ ಸತ್ಯಕ್ಕೆ ಜಯ ಸಿಕ್ಕಿದೆ ಎಂದು
ರವಿ ಮಂಚೇಗೌಡನ ಕೊಪ್ಪಲು ಹೇಳಿದ್ದಾರೆ.
