ಮೈಸೂರು: ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಾಜ, ಕುವೆಂಪುನಗರ ಮೈಸೂರು ಶಾಖೆ ವತಿಯಿಂದ ಕಾರ್ಮಿಕರ ದಿನಾಚರಣೆ ಮತ್ತು ವಿಶ್ವ ತಾಯಂದಿರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಸಂಘದ ಅಧ್ಯಕ್ಷರಾದ ಸವಿತ ಗೌಡ ಅವರು ತಾಯಂದಿರ ಬಗ್ಗೆ ಮಾತನಾಡುತ್ತಾ ತಾಯಿಯ ಮಮತೆ ಆಳ-ಅಗಲವನ್ನು, ಭಗವಂತನ ಯಾವ ಸೃಷ್ಟಿಯಿಂದಲೂ ಅಳೆಯಲು ಸಾಧ್ಯವಿಲ್ಲ ಎಂದು ಬಣ್ಣಿಸಿದರು.
ಕಾರ್ಮಿಕರ ದಿನಾಚರಣೆಯ ಹುಟ್ಟು-ನೋವು- ನಲಿವಿನ ಬಗ್ಗೆ ಲತಾ ರಮೇಶ ಮಾತನಾಡಿದರು.
ಇದೇ ವೇಳೆ ಆದಿಚುಂಚನಗಿರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಚಂದ್ರಮ್ಮ, ಲಕ್ಷ್ಮಮ್ಮ, ಶೋಭಾ, ಸಿದ್ದಮ್ಮ, ಲಕ್ಷೀ,ರಾಗಿಣಿ, ಸುಧಾ, ನೇತ್ರಾವತಿ ಯವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಭೆಯಲ್ಲಿ ಆದಿಚುಂಚನಗಿರಿ ಶಾಲೆಯ ಆಡಳಿತಾಧಿಕಾರಿ ಯಶೋದ ಅವರು ಭಾಗವಹಿಸಿದ್ದರು.
ಪದಾಧಿಕಾರಿಗಳಾದ ರಾಜೇಶ್ವರಿ, ಸುನಂದ, ನಂದಿನಿ, ಹೇಮ,ಜಯಂತಿ, ಜಯಮ್ಮ, ಜಯಲಕ್ಷ್ಮಿ, ಹಂಸವೇಣಿ ಉಪಸ್ಥಿತರಿದ್ದರು.
