ಮೈಸೂರು: ಶಂಕರ ಜಯಂತಿ ಪ್ರಯುಕ್ತ ಮೈಸೂರಿನಲ್ಲಿ ವಿಜೃಂಬಣೆಯ ಶ್ರೀ ಶಂಕರ ರಥ ಮೆರವಣಿಗೆ ಮಾಡಲಾಯಿತು.
ಚಾಮರಾಜಪುರಂ ಗೀತಾ ರಸ್ತೆಯಲ್ಲಿರುವ ಶ್ರೀ ಪ್ರಸನ್ನ ವಿಘ್ನೇಶ್ವರ ದೇವಸ್ಥಾನದ ವತಿಯಿಂದ ಶಂಕರಾಚಾರ್ಯರ ಮೂರ್ತಿಯ ಶ್ರೀಶಂಕರ ರಥ ಮೆರವಣಿಗೆ ಆಯೋಜಿಸಲಾಗಿತ್ತು.
ಶ್ರೀಶಂಕರರ ರಥ ಮೆರವಣಿಗೆಯಲ್ಲಿ ನಾದಸ್ವರ ಮಂಗಳವಾದ್ಯ, ಅರ್ಚಕ ಪುರೋಹಿತರ ವೇದಬಳಗ, ಮಹಿಳಾ ಭಜನಾ ಮಂಡಳಿ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಚಾಮರಾಜಪುರಂ ಲಕ್ಷ್ಮಿಪುರಂ ಕೃಷ್ಣಮೂರ್ತಿಪುರಂ ಬಡಾವಣೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು,
ಮೆರವಣಿಗೆಯಲ್ಲಿ
ಶ್ರೀ ಪ್ರಸನ್ನ ವಿಘ್ನೇಶ್ವರ ದೇವಸ್ಥಾನದ
ಅಧ್ಯಕ್ಷರಾದ ಜಯರಾಂ, ಕಾರ್ಯದರ್ಶಿ ಮೋಹನ್ ರಾಮ್, ಮಧು, ಮುರಳಿ, ಶ್ರೀರಾಮ್, ಸಂದೀಪ್, ಬ್ರಾಹ್ಮಣ ಸಂಘದ ಗ್ರಾಮಾಂತರ ಅಧ್ಯಕ್ಷರಾದ
ಗೋಪಾಲ್ ರಾವ್, ಮುಡಾ ಮಾಜಿ ಸದಸ್ಯರಾದ ನವೀನ್ ಕುಮಾರ್, ಬಿಜೆಪಿ ಮುಖಂಡ ಜೋಗಿ ಮಂಜು,ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ,ನಗರ ಪಾಲಿಕೆ ಮಾಜಿ ಸದಸ್ಯ ಜಗದೀಶ್, ಟಿ.ಎಸ್ ಅರುಣ್ ಸುಚೇಂದ್ರ, ಸಿದ್ದೇಶ್ ಮತ್ತಿತರರು ಭಾಗವಹಿಸಿದ್ದರು.
