ಮೈಸೂರು: ನಾಳೆ ನಡೆಯಲಿರುವ ಗುಜರಾತ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ ವಿರುದ್ಧ ಆರ್ ಸಿ ಬಿ ಗೆಲುವಿಗೆ ಅಭಿಮಾನಿಗಳು ಒಂದೊಂದು ರೀತಿಯಲ್ಲಿ ಶುಭ ಕೋರಿದ್ದಾರೆ.
ಅದರೆ ಮೈಸೂರಿನ ಲಕ್ಷ್ಮಿಪುರಂ ನಿವಾಸಿ ಡಾಕ್ಟರ್ ಶ್ರೀನಿವಾಸ್ ಆಚಾರ್ಯ ಹಾಗೂ ರೇಖಾ ಶ್ರೀನಿವಾಸ್ ದಂಪತಿ ವಿಶೇಷವಾಗಿ ಶುಭ ಹಾರೈಸಿದ್ದು ಅಭಿಮಾನಿಗಳ ಮನಸೂರೆಗೊಂಡಿದೆ.
ಅದು ಏನಂತೀರಾ,ಡಾಕ್ಟರ್ ಶ್ರೀನಿವಾಸ್ ಆಚಾರ್ಯ ಹಾಗೂ ರೇಖಾ ಶ್ರೀನಿವಾಸ್ ದಂಪತಿ ತಮ್ಮ ಪುಟ್ಟ 6 ತಿಂಗಳ ಕಂದಮ್ಮನಿಗೆ ಆರ್ಸಿಬಿ ಜರ್ಸಿ ಧರಿಸಿ
ಆರ್ ಸಿ ಬಿ ಕಪ್ ನಮ್ಮದೇ ಎಂದು
ವಿಶೇಷವಾಗಿ ಭತ್ತದಿಂದ ಬರೆದು ಅಲಂಕರಿಸಿ ಮಗು ಮೂಲಕ ಶುಭ ಹಾರೈಸಿದ್ದಾರೆ.
