
ಮೈಸೂರು: ಸನಾತನ ಧರ್ಮದ ಅಭಿವೃದ್ಧಿ, ಹಿಂದೂ ಸಮಾಜದ ಸಂಘಟನೆ ಹಾಗೂ ರಾಮ ರಾಜ್ಯದ ಸಾಕಾರಾತೆಗಾಗಿ ಮೈಸೂರಿನಲ್ಲಿ ಇದೇ ಏ.19 ರಂದು ಭಕ್ತಾದಿಗಳು ಆರು ಕೋಟಿ ರಾಮನಾಮ ಜಪ ಹಾಗೂ ರಾಮ ತಾರಕ ಹೋಮವನ್ನು ಹಮ್ಮಿಕೊಂಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ
ಉತ್ತರಾದಿ ಮಠದ ವ್ಯವಸ್ಥಾಪಕರಾದ ಪಂಡಿತ್ ಶ್ರೀ ಅನಿರುದ್ಧಾಚಾರ್ಯ ಪಾಂಡುರಂಗಿ ಮತ್ತು ಅಖಿಲ ಭಾರತ ಬ್ರಾಹ್ಮಣ ಏಕೀಕೃತ ಪರಿಷತ್ ರಾಜ್ಯಾಧ್ಯಕ್ಷರಾದ ಎನ್ ಎಂ ನವೀನ್ ಕುಮಾರ್ ವಿವರ ನೀಡಿದರು.
ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲಮಹಾ ಸಂಸ್ಥಾನ ಶ್ರೀ ಮದುತ್ತರಾದಿ ಮಠಾಧೀಶರಾದ ಪೂಜ್ಯ ಶ್ರೀ1008 ಸತ್ಯಾತ್ಮತೀರ್ಥ ಶ್ರೀಪಾದಂಗಳರವರ ಮಾರ್ಗದರ್ಶನದಲ್ಲಿ ಸನಾತನ ಧರ್ಮದ ಅಭಿವೃದ್ಧಿ, ಹಿಂದೂ ಸಮಾಜದ ಸಂಘಟನೆ ಹಾಗೂ ರಾಮ ರಾಜ್ಯದ ಸಾಕಾರಾತೆಗಾಗಿ
ಭಕ್ತಾದಿಗಳಿಂದ ಮೈಸೂರಿನ ಯಾದವಗಿರಿಯಲ್ಲಿರುವ ಶ್ರೀ ಉತ್ತರಾದಿ ಮಠದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಏಪ್ರಿಲ್ 19 ರಂದು ಬೆಳಗ್ಗೆ 9 ಗಂಟೆಗೆ ರಾಮ ತಾರಕ ಹೋಮ ಹಾಗೂ 11 ಗಂಟೆಗೆ ಸಾಮೂಹಿಕ ಆರು ಕೋಟಿ ರಾಮನಾಮ ಜಪವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
19 ರಂದು ಬೆಳಿಗ್ಗೆ 7.30ಕ್ಕೆ ಪಂಡಿತ್ ಶ್ರೀ ವಿದ್ಯಾಧೀಶಚಾರ್ಯ ಗುತ್ತಲ್ ಅವರಿಂದ ಪ್ರಾಣ ದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ ಹಾಗೂ ಮಧು ಅಭಿಷೇಕ, ಬೆಳಗ್ಗೆ 9 ಗಂಟೆಗೆ ಪಂಡಿತ್ ಶ್ರೀ ಆದ್ಯ ಗೋವಿಂದಾಚಾರ್ಯ ಅವರಿಂದ ರಾಮ ತಾರಕ ಹೋಮ, ಬೆಳಗ್ಗೆ 11ಕ್ಕೆ ರಾಮ ನಾಮ ಜಪ ನಂತರ ಹೋಮದ ಪೂರ್ಣಾಹುತಿ, ಮಹಾ ಮಂಗಳಾರತಿ ಮಧ್ಯಾಹ್ನ 12 ರಿಂದ 1.30 ಭಕ್ತರಿಗೆ ಪ್ರಸಾದ ವಿನಿಯೋಗ ಇರಲಿದೆ ಎಂದು ವಿವರಿಸಿದರು.
ಇದೇ ವೇಳೆ ನವೀಕೃತ ಶ್ರೀ ಸತ್ಯ ಪ್ರಮೋದ ಕಲ್ಯಾಣ ಮಂಟಪದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಂಡಿದ್ದು ಶ್ರೀ ಜಯತೀರ್ಥ ವಿದ್ಯಾಪೀಠ ಬೆಂಗಳೂರು ಪ್ರಾಂಶುಪಾಲರು ಪಂಡಿತ್ ಶ್ರೀ ಸತ್ಯ ಧ್ಯಾನಾಚಾರ್ಯ ಕಟ್ಟಿ ಅವರು ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಶಾಸಕರಾದ ಹರೀಶ್ ಗೌಡ,ಟಿ.ಎಸ್ ಶ್ರೀವತ್ಸ, ಮಾಜಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್,
ಭಾರತ ಬ್ರಾಹ್ಮಣ ಏಕೃತ ಪರಿಷತ್ ರಾಜ್ಯಾಧ್ಯಕ್ಷ ಎನ್.ಎಂ ನವೀನ್ ಕುಮಾರ್, ಮೈಸೂರು ನಗರ ಹಾಗೂ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ ಪ್ರಕಾಶ್,ಮಂಗಳೂರು ಗಣೇಶ ಬೀಡಿ ವರ್ಕ್ಸ್ ನ ಜಗನ್ನಾಥ ಶಣೈ ಭಾಗವಹಿಸುವರು.
ವಿಶೇಷ ಆಹ್ವಾನಿತರಾಗಿ ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಸಂಸ್ಥಾಪಕರಾದ ಭಾಷ್ಯಂ ಸ್ವಾಮೀಜಿ, ವಾಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಮೀಳಾ ಭರತ್, ಸಮಾಜ ಸೇವಕರಾದ ಡಾಕ್ಟರ್ ರಘುರಾಂ ವಾಜಪೇಯಿ,ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ ಆರ್ ಸತ್ಯನಾರಾಯಣ್, ಸಮಗ್ರ ಸೂಪರ್ ಸ್ಟೋರ್ಸ್ ನ ಅನಂತನಾಗರಾಜ್,ಸ್ಮಾರ್ಟ್ ಎಲೆಕ್ಟ್ರಾನಿಕ್ ಇಂಕ್ ನ ಭಾಸ್ಕರ್ ರಾವ್ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ ಎಂದು ನವೀನ್ ಕುಮಾರ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಎಸ್ ಬಿ ವಾಸುದೇವ್ ಮೂರ್ತಿ,ವಿಶ್ವ ಹಿಂದೂ ಪರಿಷತ್ ರಾಜ್ಯಾಧ್ಯಕ್ಷರಾದ ಮಹೇಶ್ ಕಾಮತ್,ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್,ನಿರೂಪಕ ಅಜಯ್ ಶಾಸ್ತ್ರಿ,
ಪ್ರಮೋದ್ ಆಚಾರ್ ಉಪಸ್ಥಿತರಿದ್ದರು.
