ಮೈಸೂರು: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆ ಹಮ್ಮಿಕೊಂಡಿರುವ ಸ್ವಾತಂತ್ರ್ಯೋತ್ಸವ ಸ್ವಚ್ಛತಾ ಅಭಿಯಾನ-2026:80 ತ್ಯಾಜ್ಯಮುಕ್ತ ತಾಣಗಳು ಅಭಿಯಾನದಡಿ ನಗರದ ವಿವಿಧ ವಲಯಗಳಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿದ್ದ ಸ್ಥಳಗಳನ್ನು ಸ್ವಚ್ಛಗೊಳಿಸಿ, ತ್ಯಾಜ್ಯಮುಕ್ತ ತಾಣಗಳಾಗಿ ಪರಿವರ್ತಿಸಲಾಗುತ್ತಿದೆ.
ಇಂದು ನಗರದ ವಿವಿಧ ವಲಯಗಳ 5 ಜಿವಿಪಿ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಾಚರಣೆ ಕೈಗೊಳ್ಳಲಾಯಿತು. ಒಟ್ಟಾರೆ 170 ಮಂದಿ ಭಾಗವಹಿಸಿ, ಸುಮಾರು 6.35 ಟನ್ ತ್ಯಾಜ್ಯವನ್ನು ತೆರವುಗೊಳಿಸಿದರು.
ವಲಯ–5ರ ಕೆಂಪೇಗೌಡ ಕ್ರೀಡಾಂಗಣ, ಕುಂಬಾರಕೊಪ್ಪಲು ಪ್ರದೇಶದಲ್ಲಿ ನಡೆದ ಸ್ವಚ್ಛತಾ ಕಾರ್ಯಾಚರಣೆಯಲ್ಲಿ 50 ಮಂದಿ ಭಾಗವಹಿಸಿ, ಸುಮಾರು 1 ಟನ್ ತ್ಯಾಜ್ಯ ತೆರವುಗೊಳಿಸಿದರು. ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಆರೋಗ್ಯ ತಂಡದ ನೇತೃತ್ವದಲ್ಲಿ ಚಾಮುಂಡಿ ಚಿಲ್ಡ್ರನ್ಸ್ ಹೋಮ್ ಮಕ್ಕಳು ಹಾಗೂ ಸ್ಥಳೀಯ ನಿವಾಸಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವಲಯ–5ರ ಸಿದ್ದಣ್ಣ ಸೈಕಲ್ ಶಾಪ್ ಸಮೀಪ, ಕುಂಬಾರಕೊಪ್ಪಲು ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 25 ಮಂದಿ ಭಾಗವಹಿಸಿ, ಸುಮಾರು 0.7 ಟನ್ ತ್ಯಾಜ್ಯವನ್ನು ತೆರವುಗೊಳಿಸಿದರು. ವಲಯ–5ರ ತಂಡ ಹಾಗೂ ಸ್ಥಳೀಯ ನಿವಾಸಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವಲಯ–3ರ ಹುಡ್ಕೋ ಗಣಪತಿ ದೇವಸ್ಥಾನ ಪ್ರದೇಶದಲ್ಲಿ ನಡೆದ ಸ್ವಚ್ಛತಾ ಕಾರ್ಯಾಚರಣೆಯಲ್ಲಿ 50 ಮಂದಿ ಭಾಗವಹಿಸಿ, ಸುಮಾರು 3.5 ಟನ್ ತ್ಯಾಜ್ಯವನ್ನು ತೆರವುಗೊಳಿಸಿದರು. ಕಾರ್ಯಪಾಲಕ ಅಭಿಯಂತರರಾದ ಶ್ರೀ ಶ್ರೀನಿವಾಸ್ ಹಾಗೂ ತಂಡದ ನೇತೃತ್ವದಲ್ಲಿ ವಿದ್ಯಾ ಗಣಪತಿ ಸೇವಾ ಸಮಿತಿ ಮತ್ತು ಸ್ಥಳೀಯ ನಿವಾಸಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವಲಯ–8ರ ಮುಸ್ಲಿಂ ಕೋ-ಆಪರೇಟಿವ್ ಬ್ಯಾಂಕ್, ನಿಮ್ರಾ ಮಸೀದಿ ರಸ್ತೆ ಪ್ರದೇಶದಲ್ಲಿ ನಡೆದ ಸ್ವಚ್ಛತಾ ಕಾರ್ಯಾಚರಣೆಯಲ್ಲಿ 20 ಮಂದಿ ಭಾಗವಹಿಸಿ, ಸುಮಾರು 0.15 ಟನ್ ತ್ಯಾಜ್ಯವನ್ನು ತೆರವುಗೊಳಿಸಿದರು. ಕೌನ್ಸಿಲ್ ಕಾರ್ಯದರ್ಶಿ ಶ್ರೀ ವೆಂಕಟೇಶ ಹಾಗೂ ವಲಯ ಆಯುಕ್ತರಾದ ಶ್ರೀ ಸೋಮಶೇಖರ ಅವರ ನೇತೃತ್ವದಲ್ಲಿ ವಲಯ–8ರ ಅಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವಲಯ–8ರ ರಾಜೇಂದ್ರನಗರ 5ನೇ ಕ್ರಾಸ್ ಪ್ರದೇಶದಲ್ಲಿ ನಡೆದ ಸ್ವಚ್ಛತಾ ಕಾರ್ಯಾಚರಣೆಯಲ್ಲಿ 25 ಮಂದಿ ಭಾಗವಹಿಸಿ, ಸುಮಾರು 1 ಟನ್ ತ್ಯಾಜ್ಯವನ್ನು ತೆರವುಗೊಳಿಸಿದರು. ವಲಯ ಆಯುಕ್ತರಾದ ಶ್ರೀ ಸೋಮಶೇಖರ ಅವರ ನೇತೃತ್ವದಲ್ಲಿ ವಲಯ–8ರ ಅಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
