ಮೈಸೂರು: ಮೈಸೂರಿನ
ಜನನಿ ಸೇವಾ ಟ್ರಸ್ಟ್ ವತಿಯಿಂದ ಇತ್ತೀಚೆಗೆ ಮೈಸೂರಿನ ಪತ್ರಿಕಾ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಕೆ. ಕಮಲಮ್ಮ ಅವರ 16ನೇ ವರ್ಷದ ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಪ್ರಯುಕ್ತ ಸಾಧಕ ಮಹಿಳೆಯರಿಗೆ ಸನ್ಮಾನಿಸಿ ಗೌರವ ಸಮರ್ಪಣೆ ಮಾಡಲಾಯಿತು.
‘ಮಹಿಳೆ- ಕಹಳೆ’ ಹೆಸರಿನಲ್ಲಿ ಪ್ರತಿದಿನ ಜನಸೇವೆಯಲ್ಲಿ ತೊಡಗಿರುವ 16
ಮಂದಿ”ದಿಟ್ಟ ಮಹಿಳೆಯ”ರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪೌರಕಾರ್ಮಿಕ ಮಹಿಳೆ ಕೊಲ್ಲಮ್ಮ, ಆರೋಗ್ಯ ಕೇಂದ್ರದ ಸುರಕ್ಷತಾಧಿಕಾರಿ ಎಸ್.ಎಂ. ಸುಜಾತ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಮಲ ಆನಂದ್,ಅಂಗನವಾಡಿ ಕಾರ್ಯಕರ್ತೆ ಡಿ. ಪುಷ್ಪ, ನೀಲಮ್ಮ, ಪವಿತ್ರಾ, ಡಾ. ಚಿತ್ಕಲಾ ಅರುಣ್, ರಶ್ಮಿ ಚಿಕ್ಕಮಗಳೂರು, ತನುಜ ಮಹೇಶ್, ಡಾ. ಸಿರೀಶಾ ಎಸ್.ಕುಮಾರ್, ಕವಿತಾ ಶೆಟ್ಟಿ, ಹೆಚ್.ಕೆ. ಗೀತಾಕುಮಾರ್, ಲತಾ, ಜಯಂತಿ, ಭಾನುಮತಿ,ಕು. ಜಿ.ಎಂ.ಹರ್ಷತಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಾಧಕಿಯರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದ ಶಾಸಕ ಕೆ.ಹರೀಶ್ಗೌಡ ಅವರ ಪತ್ನಿ ಹಾಗೂ ಸಂಸ್ಕೃತಿ ಚಿಂತಕರಾದ ಸಿ.ಗೌರಿ ಹರೀಶ್ ಗೌಡ ಅವರು,ಯಾವುದೇ ಪುರುಷರು ಸಾಧನೆ ಮಾಡಬೇಕಾದಲ್ಲಿ ಮನೆಯಲ್ಲಿ ಸಹಕಾರ ಬೆಂಬಲ ಸಿಗಬೇಕು ಎಂದು ಹೇಳಿದರು.
ಇಂದು ನಾನು ಸಹಕಾರಿಯಾಗಿ ನಿಂತಿರುವುದರಿಂದ ನಮ್ಮ ಮನೆಯವರು ಶಾಸಕರಾಗಿದ್ದಾರೆ. ಅವರು ಶಾಸಕರಾಗಿದ್ದಕ್ಕೆ ನಾನು ನಿಮ್ಮ ಮುಂದೆ ನಿಂತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿದರು.
ಮಹಿಳೆ ಸಾಧನೆ ಮಾಡುವುದು ಎಷ್ಟು ಮುಖ್ಯವೋ ತನ್ನ ಮನೆ, ಪತಿ ಮತ್ತು ಮಕ್ಕಳನ್ನು ಚನ್ನಾಗಿ ನೋಡಿಕೊಳ್ಳುವುದೂ ಸಹ ಅಷ್ಟೇ ಮುಖ್ಯ ಎಂದು ನುಡಿದರು.
ಪ್ರಜಾಭಾರತ ಮೀಡಿಯಾ ಹೌಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ವಿಭಾವಸು ದೀಪಕ್ ಮಾತನಾಡಿ, ಸಾಮಾಜಿಕ ಸ್ಥಾನಮಾನಕ್ಕೆ ಅರ್ಹಳಲ್ಲ ಎಂದು ಭಾವಿಸಿದ್ದ ಸಮಾಜದಲ್ಲಿ ಇಂದು ಪುರುಷರೇ ಸಾಧಕ ಮಹಿಳೆಯರನ್ನು ಗುರುತಿಸಿ ಗೌರವಿಸುವ ಹಂತಕ್ಕೆ ತಲುಪಿದ್ದೇವೆ ಇದು ಖುಷಿ ಪಡುವ ವಿಚಾರ ಎಂದು ತಿಳಿಸಿದರು.
ನಮಗೆ ಸಮಾನತೆ ಬಂದ ಮೇಲೆ ನಮಗಿರುವ ಸವಾಲುಗಳ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕಿದೆ. ಹೊರಗೆ ದುಡಿಯುವ ಮಹಿಳೆ ಮನೆಯನ್ನು ನಿರ್ವಹಣೆ ಮಾಡುವುದು ಹೇಗೆ, ಗಳಿಸಿದ ಹಣವನ್ನು ಉಳಿಸುವುದು ಹೇಗೆ, ಮೊಬೈಲ್ ಯುಗದಲ್ಲಿ ನಮ್ಮ ಖಾಸಗಿತನವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ನಾವೆಲ್ಲ ಗಂಭೀರವಾಗಿ ಆಲೋಚಿಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾರಾಣಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ. ಸುಧಾ ರಮೇಶ್,ಖ್ಯಾತ ಲೇಖಕಿಯರಾದ ಕರೋಡಿ ಎಂ.ಲೋಲಾಕ್ಷಿ, ಡಾ. ಸಿ. ಜಿ. ಉಷಾದೇವಿ, ವಾರ್ತಾ ಮತ್ತು ಸಂಪರ್ಕ ಇಲಾಖೆ, ಸಹಾಯಕ ನಿರ್ದೇಶಕರಾದ ನಿರ್ಮಲ , ಟ್ರಸ್ಟ್ ನ ಪ್ರ. ಕಾರ್ಯದರ್ಶಿ ಆರ್ ಸೌಮ್ಯ, ನಂದಿನಿ, ಸುಧಾ ಮುರಳಿ, ಸೌಭಾಗ್ಯ, ಎ.ನೇವಲ್, ಅನುಸೂಯ, ಗಾಯತ್ರಿ ಮತ್ತಿತರರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ರೂವಾರಿ ಜನನಿ ಸೇವಾ ಟ್ರಸ್ಟ್ ಅಧ್ಯಕ್ಷರೂ ಕಾಂಗ್ರೆಸ್ ಮುಖಂಡರಾದ ಎಂ.ಕೆ.ಅಶೋಕ್ ಅಧ್ಯಕ್ಷತೆ ವಹಿಸಿದ್ದರು.

