ಕ್ಯಾಲಿಫೋರ್ನಿಯಾ: ಒಂದೇ ನಿಮಿಷದಲ್ಲಿ ಎಲ್ರೂ ನೋಡ್ತಾ ಇದ್ದ ಹಾಗೇನೆ
10 ಮಂದಿ ದರೋಡೆಕೋರರು 15 ಕೋಟಿ ಬೆಲೆಯ ಚಿನ್ನಾಭರಣ ದೋಚಿದ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ಕ್ಯಾಲಿಫೋರ್ನಿಯಾದ ಫ್ರೀಮಾಂಟ್ನಲ್ಲಿರುವ ಭಾರತೀಯ ಒಡೆತನದ ಕುಮಾರ್ ಜ್ಯುವೆಲ್ಲರ್ಸ್ ನಲ್ಲಿ ಸಿನಿಮೀಯ ರೀತಿಯಲ್ಲಿ
ಸುಮಾರು 10 ಮಂದಿ ದರೋಡೆಕೋರರು ನುಗ್ಗಿ 15 ಕೋಟಿಗೂ ಹೆಚ್ಚು ಮೌಲ್ಯದ ಆಭರಣಗಳನ್ನು ದೋಚಿದ್ದಾರೆ.
ದುಷ್ಕರ್ಮಿಗಳು ಕದಿಯುವ ದೃಶ್ಯಗಳು ಸಿಸಿಟಿವಿಯ ಈ ಘಟನೆ 2025ರ ಜೂನ್ 18ರಂದು ನಡೆದಿದೆ,ತಡವಾಗಿ ವರದಿಯಾಗಿದೆ ಆಭರಣ ಅಂಗಡಿಯ ಶೇ.75ರಷ್ಟು ಆಭರಣಗಳನ್ನು ಕಳವು ಮಾಡಲಾಗಿತ್ತು.
ಅಂಗಡಿಗೆ ಪಿಕ್ಸ್, ಸುತ್ತಿಗೆಗಳು ಮತ್ತು ಹೊತ್ತೊಯ್ಯುವ ಚೀಲಗಳೊಂದಿಗೆ ನುಗ್ಗಿದ ಶಸ್ತ್ರಸಜ್ಜಿತ ದರೋಡೆಕೋರರು ವೇಗವಾಗಿ ಗಾಜಿನ ಪೆಟ್ಟಿಗೆಗಳನ್ನು ಒಡೆದು ಚಿನ್ನ ಮತ್ತು ವಜ್ರಗಳನ್ನು ಕದ್ದಿದ್ದಾರೆ. ದರೋಡೆಕೋರರು ಕದ್ದ ಕಾರುಗಳನ್ನು ವಿವಿಧ ದಿಕ್ಕುಗಳಲ್ಲಿ ಬಳಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಇದರಿಂದಾಗಿ ಕಾನೂನು ಜಾರಿ ಸಂಸ್ಥೆಗಳಿಗೆ ಅವರನ್ನು ತಕ್ಷಣಕ್ಕೆ ಬಂಧಿಸುವುದು ಕಷ್ಟಕರವಾಗಿದೆ.
