ಚನ್ನರಾಯಪಟ್ಟಣ: ಹೊಸ ವರ್ಷದಲ್ಲಿ ಮಳೆ ಬೆಳೆ ಉತ್ತಮವಾಗಿ ಸಮೃದ್ಧಿ ಜೀವನ ನಡೆಯಲಿ ಎಂದು ಪ್ರಾರ್ಥಿಸಿ ಚನ್ನರಾಯಪಟ್ಟಣದ ಚೆನ್ನೇನಹಳ್ಳಿ ಗ್ರಾಮಸ್ಥರು ಹೊನ್ನಾರು ಕಟ್ಟಿ ದೈವಭಕ್ತಿ ಮೆರೆದರು.
ಗ್ರಾಮದಲ್ಲಿ ಯಾವುದೇ ಜಾತಿ ಮತ ಭೇದ ಭಾವವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಹೊನ್ನಾರು ಕಟ್ಟುವ ಮೂಲಕ ಸಮೃದ್ಧಿ ಸುಖ ಸಂತೋಷ ದೊರೆಯಲಿ ಎಂದು ಪ್ರಾರ್ಥಿಸಿದರು.
ಈ ವರ್ಷ ಗ್ರಾಮದ ಆನಂದ್ ಚನ್ನೇನಳ್ಳಿ ಮತ್ತು ಮಂಜಣ್ಣ ಎಂಬುವವರು ಹೊನ್ನಾರು ನಡೆಸಿಕೊಟ್ಟರು.
ಈ ವೇಳೆ ಗ್ರಾಮದ ಮುಖಂಡರು, ಹಿರಿಯರು, ಮಹಿಳೆಯರು, ಮಕ್ಕಳು, ಕೇಕೆ ಹಾಕಿ,ಸಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಒಟ್ಟಾರೆ ಗ್ರಾಮದ ಜನತೆ ನವ ಸಂವತ್ಸರ ಹೊಸ ವರ್ಷ ಯುಗಾದಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿ ಭಕ್ತಿ ಭಾವ ಮೆರೆದರು.
