ಯಳಂದೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ದೇವೇಗೌಡ ಅವರ ನಿಧನದ ಹಿನ್ನೆಲೆಯಲ್ಲಿ,
ಯಳಂದೂರು ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸಂತಾಪ ಹಾಗೂ ಶ್ರದ್ಧಾಂಜಲಿ ಸಭೆಗಳನ್ನು ಹಮ್ಮಿಕೊಳ್ಳಲಾಯಿತು.
ಜೆಡಿಎಸ್ ಪಕ್ಷದ ತಾಲೋಕು ಅಧ್ಯಕ್ಷ ಕೆಸ್ತೂರು ಆನಂದ , ಪಟ್ಟಣ ಅಧ್ಯಕ್ಷ ಚಂದ್ರಶೇಖರ ಕೊಳ್ಳೇಗಾಲ ಸೇರಿದಂತೆ ಹಲವು ಕಾರ್ಯಕರ್ತರು ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೌನಾಚರಣೆ ಮಾಡಿ ಗೌರವ ಸಲ್ಲಿಸಿದರು.
ಸಭೆಯಲ್ಲಿ ಜೆಡಿಎಸ್ ಪಕ್ಷದ ಪ್ರದಾನ ಕಾರ್ಯದರ್ಶಿ ಅಂಬಳೆ ರವೀಶ್, ವಡಗೆರೆ ಸುಂದರ, ವೈಕೆ ಮೋಳೆ ಸೋಮಣ್ಣ, ಉಪ್ಪಿನಮೊಳೆ ಮಹೇಶ್, ಯರಿಯೂರು ಜಯಣ್ಣ, ಮದ್ದೂರು ಬಿ.ಲಿಂಗರಾಜು ಸೇರಿದಂತೆ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಸಂತಾಪ ಸೂಚಿಸುವ ಮೂಲಕ ಚೆನ್ನಮ್ಮ ಅವರ ಸರಳತೆಯನ್ನು ಸ್ಮರಿಸಿ ಶ್ರದ್ಧಾಂಜಲಿ ಅರ್ಪಿಸಿದರು.
