ಮೈಸೂರು: ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಜನ್ಮದಿನದ ಪ್ರಯುಕ್ತ ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲ ವತಿಯಿಂದ ಬೋಗಾದಿಯ ರಾಜರಾಜೇಶ್ವರಿ ನಗರದ 80 ಅಡಿ ರಸ್ತೆಯಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು.
ಮುಖ್ಯ ರಸ್ತೆಯ ಒಂದು ಬದಿಯ ಪಾದಚಾರಿ ಮಾರ್ಗ ಗಿಡ ಗಂಟಿಗಳಿಂದ ಆವೃತವಾಗಿ, ಜನ ಎಸೆದಿದ್ದ ಪ್ಲಾಸ್ಟಿಕ್ ತ್ಯಾಜ್ಯದಿಂದ ತುಂಬಿಹೋಗಿತ್ತು. ಇದನ್ನು ಗಮನಿಸಿದ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ಬಿಜೆಪಿ ಕಾರ್ಯಕರ್ತರು ಸಂಸದ ಯದುವೀರ್ ಅವರ ಹುಟ್ಟುಹಬ್ಬದ ದಿನದಂದು ಶ್ರಮದಾನ ಮಾಡಿ ಸ್ವಚ್ಛಗೊಳಿಸಿದರು.
ನಂತರ ಘೋಷಣೆಗಳ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವಂತೆ ಸ್ವಚ್ಛ ಭಾರತದ ಬಗ್ಗೆ ಸಾರ್ವಜನಿಕರನ್ನು ಜಾಗೃತಗೊಳಿಸಿದರು.
ಚಾಮುಂಡೇಶ್ವರಿ ನಗರ ಮಂಡಲದ ಬಿಜೆಪಿ ಅಧ್ಯಕ್ಷ ರಾಕೇಶ್ ಭಟ್ ನೇತೃತ್ವದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಸದಸ್ಯೆ ಲಕ್ಷ್ಮಿ ಕಿರಣ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಆರ್. ಸೋಮಶೇಖರ್, ಈರೇಗೌಡ, ಉಪಾಧ್ಯಕ್ಷರಾದ ಶಿವು ಪಟೇಲ್, ಹೆಚ್. ಎಸ್. ಹಿರಿಯಣ್ಣ, ಕಾರ್ಯದರ್ಶಿ ಪಿ. ಸೋಮಣ್ಣ, ನಗರ ಮೋರ್ಚಾ ಪದಾಧಿಕಾರಿಗಳಾದ ಎಸ್. ತ್ಯಾಗರಾಜ್, ಎನ್. ಪ್ರತಾಪ್, ಮಂಡಲದ ಮೋರ್ಚಾ ಪದಾಧಿಕಾರಿಗಳಾದ ಮಧು ಸೋಮಶೇಖರ್, ಜೆ.ರಂಗೇಶ್, ಚಂದನ್ ಗೌಡ,
ಎಸ್. ಮಹೇಶ್ ಕುಮಾರ್, ರಾಘವೇಂದ್ರ ಮತ್ತಿತರರು ಭಾಗವಹಿಸಿದ್ದರು.
