ಮೈಸೂರು: ನಗರದ ಪಂಪಾಪತಿ ರಸ್ತೆಯಲ್ಲಿರುವ ಸಾನಿಧ್ಯ ವೃದ್ಧಾಶ್ರಮದ ಹಿರಿಯ ನಾಗರಿಕ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ಹೋಳಿಗೆ,ಡ್ರೈ ಫ್ರೂಟ್ಸ್,ಹಣ್ಣು ವಿತರಿಸುವ ಸೇವಾ ಕಾರ್ಯದೊಂದಿಗೆ ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಲ ಪ್ರತಿಭೆ ಅಭಿಜ್ಞಾ ಸಾಯಿಯನ್ನು ಸ್ನೇಹ ಬಳಗದ ವತಿಯಿಂದ ಅಭಿನಂದಿಸಲಾಯಿತು.
ಈ ವೇಳೆ ಮಾತನಾಡಿದ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯಾದರ್ಶನ್ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಮೈಸೂರು ಸಂಸ್ಥಾನದ ಮಹಾರಾಜರು ಆಗಿರುವ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಆ ಭಗವಂತ ಇನ್ನೂ ಹೆಚ್ಚಿನ ಆಯುರಾರೋಗ್ಯ ನೀಡಲಿ ಹಾಗೂ ಸುಧೀರ್ಘಕಾಲ ಜನಸೇವೆ ಮಾಡುವ ಚೈತನ್ಯ ಶಕ್ತಿಯನ್ನು ಕರುಣಿಸಲಿ ಎಂದು ಹಾರೈಸಿದರು.
ಮಹಾರಾಜರಾದರೂ ಕೂಡ ಜನಸೇವೆಗೆ ಕಂಕಣ ಬದ್ಧರಾಗಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಜನಸೇವೆ ಮಾಡುತ್ತಿರುವ ಅವರ ಕಾರ್ಯವೈಕರಿ, ಇತರರಿಗೆ ಸಹಾಯ ಮಾಡುವ ಗುಣ ಶ್ಲಾಘನೀಯವಾದದ್ದು ಎಂದು ತಿಳಿಸಿದರು.
ಅವರ ಜನಪರ ಕಾಳಜಿ ಸರಳ ವ್ಯಕ್ತಿತ್ವ ಎಲ್ಲರಿಗೂ ಅನುಕರಣಿಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ನೇಹ ಬಳಗದ ಸದಸ್ಯರು ಹಾಗೂ ಸಾನಿಧ್ಯ ವೃದ್ಧಾಶ್ರಮದ ಹಿರಿಯ ನಾಗರಿಕ ಬಂಧುಗಳು ಯದುವೀರ್ ಒಡೆಯರ್ ಅವರ ಜನ್ಮ ದಿನಕ್ಕೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಸಿಂಚನಗೌಡ, ಗಾಯಕ ಯಶ್ವಂತ್ ಕುಮಾರ್, ಬಿಜೆಪಿ ಮುಖಂಡ ಪುರುಷೋತ್ತಮ್, ಸಮಾಜ ಸೇವಕಿ ವಿದ್ಯಾ, ಎಂ ಎಂ ಗ್ರೂಪ್ಸ್ ಮಹಾನ್ ಶ್ರೇಯಸ್, ಬಾಲ ಪ್ರತಿಭೆ ಅಭಿಜ್ಞಾ ಸಾಯಿ, ಆಶಾ,ಭಾಗೀರಥಿ, ರಾಜೇಶ್ವರಿ, ರಾಜೇಶ್ ಕುಮಾರ್,ಮಹೇಶ, ಸಾನಿಧ್ಯ ನಿಲಯದ ಚಂದ್ರಶೇಖರ್, ದತ್ತ ಮತ್ತಿತರರು
ಹಾಜರಿದ್ದರು.
