ಯಾದಗಿರಿ: ಕಾರು ಮತ್ತು ವಿ ಆರ್ಎಲ್ ಬಸ್ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡು ಕಾರ್ನಲ್ಲಿದ್ದ 6 ಮಂದಿ ಸಜೀವ ದಹನವಾದ ದಾರುಣ ಘಟನೆ ಯಾದಗಿರಿ ಜಿಲ್ಲೆ, ಸುರಪುರ ತಾಲ್ಲೂಕಿನ ಶಾಂತಪುರ ಕ್ರಾಸ್ ಬಳಿ ನಡೆದಿದೆ.
ರಾಯಚೂರ ಜಿಲ್ಲೆಯ ಶಿರವಾರ ಪಟ್ಟಣದ ಕೃಷ್ಣಾ ನಾಯಕ(52) ಪತ್ನಿ ಅನಂತ ಕಲಾ ನಾಯಕ(45), ಶರಣಪ್ಪ (36), ಪತ್ನಿ ನಿಸರ್ಗ(30), ಸಿದಾರ್ಥ(3) ಶಶಿಕಲಾ(30) ಮಬವರು ಮೃತಪಟ್ಟ ದುರ್ದೈವಿಗಳು.
ಗಂಭೀರವಾಗಿ ಗಾಯಗೊಂಡ ಅದ್ವೀಕಾ(5), ಶ್ರೀನಿಧಿ(2) ಎಂಬ ಮಕ್ಕಳನ್ನು ಯಾದಗಿರಿ ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತಪಟ್ಟವರು ಒಂದೇ ಕುಟುಂಬಕ್ಕೆ ಸೇರಿದ್ದು,ಎಲ್ಕರೂ ಬೆಳಿಗ್ಗೆ ಅಮವಾಸ್ಯೆ ಪ್ರಯುಕ್ತ ಸುರಪುರದ ಶ್ರೀ ವೇಣುಗೋಪಾಲ ಸ್ವಾಮಿ ದರ್ಶನ ಪಡೆದು ಶಿರವಾರಕ್ಕೆ ಹೋಗುತ್ತಿರುವಾಗ ಈ ಅವಘಡ ಸಂಭವಿಸಿದೆ.
2 ವಾಹನಗಳಿಗೆ ಹತ್ತಿದ ಬೆಂಕಿ ನಂದಿಸಲು ಅಗ್ನಿಶಾಮಕ ದಳ, ಪೊಲೀಸರು, ಸ್ಥಳೀಯರು ಹರಸಾಹಸ ಪಡಬೇಕಾಯಿತು.
ಸುರಪುರ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪೃಥ್ವಿಕ್ ಶಂಕರ್ ಭೇಟಿ ನೀಡಿ, ಪರಿಶೀಲಿಸಿ ಗಾಯಾಳುಗಳನ್ನು ಸುರಪುರ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಂಡರು.
ಶಾಸಕ ರಾಜಾ ವೇಣುಗೋಪಾಕ ನಾಯಕ ಸೇರಿದಂತೆ ಹಕವು ಮುಖಂಡರು ಭೇಟಿ ನೀಡಿ ಪರಿಶೀಲಿಸಿದರು.ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
