ಮೈಸೂರು: ಮೈಸೂರಿನ ಹೂಟಗಳ್ಳಿ ಯಲ್ಲಿರುವ ವೃದ್ಧಾಶ್ರಮದಲ್ಲಿ ತಾಯಂದರಿಗೆ ಪಾದಪೂಜೆ ಮಾಡಿ,ಚಾಮುಂಡೇಶ್ವರಿ ಯುವ ಬಳಗದ ವತಿಯಿಂದ ವಿಶ್ವ ತಾಯಂದಿರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು
ನಂತರ ಹಣ್ಣು ಹಂಪಲು ವಿತರಿಸಿ ತಾಯಂದಿರನ್ನು ಸತ್ಕರಿಸಿ ಅರ್ಥಪೂರ್ಣವಾಗಿ ತಾಯಂದಿರ ದಿನಾಚರಣೆ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಸಮಾಜ ಸೇವಕ ಚಿನ್ನಂಬಳ್ಳಿ ಮಹದೇವು ಅವರು,
ದೇಶ ಕಾಯುವ ಯೋಧ, ಅನ್ನ ನೀಡುವ ಅನ್ನದಾತ ಹಾಗೂ ಜನ್ಮ ನೀಡಿದ ತಾಯಿ ಪ್ರಪಂಚದಲ್ಲೇ ಅತೀ ಮುಖ್ಯ ಎಂದು ಹೇಳಿದರು.
ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದಿ ಉನ್ನತ ಸ್ಥಾನಗಳಿಗೆ ಏರುತ್ತಿದ್ದಂತೆ ಹೆತ್ತು ಹೊತ್ತು ಸಾಕಿದ ತಂದೆ-ತಾಯಿಗಳನ್ನು ಅನಾಧಾರಣೆ ಮಾಡುವುದು ಹೆಚ್ಚಾಗುತ್ತಿದೆ,ಎಲ್ಲವನ್ನು ಹಣದಿಂದ ಅಳೆಯಲಾಗುತ್ತಿದೆ,ಇಳಿ ವಯಸ್ಸಿನಲ್ಲಿ ಪ್ರೀತಿಯಿಂದ ಕಾಣಬೇಕಾದ ತಂದೆ ತಾಯಿಯನ್ನು ಹಣ ನೀಡಿ ವೃದ್ಧಾಶ್ರಮಗಳಿಗೆ ಸೇರಿಸುತ್ತಾರೆ ಎಂದು ವಿಷಾದಿಸಿದರು.
ಇಳಿ ವಯಸ್ಸಿನಲ್ಲಿ ಮಕ್ಕಳ ಪ್ರೀತಿ ದೊರೆಯದೆ ತಂದೆ,ತಾಯಿ ಕೊರಗುತ್ತಾರೆ. ವಿಶ್ವ ತಾಯಂದಿರ ದಿನ, ವಿಶ್ವ ಅಪ್ಪಂದಿರ ದಿನವನ್ನು ಯಾವ ಪುರುಷಾರ್ಥಕ್ಕೆ ಆಚರಿಸಬೇಕು ಎಂದು ಬೇಸರ ವ್ಯಕ್ತಪಡಿಸಿದರು.
ಸಸ್ಯವರ್ಗ, ಪ್ರಾಣಿವರ್ಗ, ಮನುಷ್ಯವರ್ಗ, ಖನಿಜವರ್ಗ ಸೇರಿದಂತೆ 10 ವರ್ಗಗಳಿವೆ. ವಿವೇಚನೆಯುಳ್ಳ ಮನುಷ್ಯ ಕೆಳ ಅಂತಸ್ತಿನಲ್ಲಿರುವ ವರ್ಗಗಳ ಅಭಿವೃದ್ಧಿಗೆ ಶ್ರಮಿಸುವುದರ ಮೂಲಕ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಚಿನ್ನಂಬಳ್ಳಿ ಮಹದೇವು ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಪಂಚಾಯತ್ ಗ್ರಾಮೀಣಾಭಿವೃದ್ಧಿ ರೈತರ ಸೇವಾ ಸಮಿತಿಯ ರಾಜ್ಯಧ್ಯಕ್ಷರಾದ ಯಾದವ್ ಹರೀಶ್,ಒಂದು ಹೆಜ್ಜೆ ರಕ್ತದಾನಿ ಬಳಗದ ಅಧ್ಯಕ್ಷರಾದ ರಕ್ತದಾನಿ ಮಂಜು, ಸಂಸ್ಥೆಯ ಕಾರ್ಯದರ್ಶಿ ಚೈತ್ರ,ಸಹ ಕಾರ್ಯದರ್ಶಿ ಅಶ್ವಿನಿ, ಪುರುಷೋತ್ತಮ್, ಡಾ. ವೆಂಕಟೇಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಲತಾ, ರಮೇಶ್,ಲೋಕೇಶ್, ರವಿತೇಜ, ಬೈರತಿ ಲಿಂಗರಾಜು, ಮೋಹಿತ್ ಮಹದೇವ್, ಕೃಷ್ಣಪ್ಪ (ಗಂಟಯ್ಯ)ಮತ್ತು ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹಾಜರಿದರು.
