ಮೈಸೂರು: ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡುವ ಮಸೂದೆ ಸೋಲನ್ನು ಸಂಭ್ರಮಿಸುವುದು ಖಂಡನೀಯ ಎಂದು
ಬಿಜೆಪಿ ಮುಖಂಡರಾದ ಡಾ ಹೇಮಾ ನಂದೀಶ್ ಹೇಳಿದ್ದಾರೆ.
ಲೋಕಸಭೆಯಲ್ಲಿ ನಾರಿ ಶಕ್ತಿ ವಂದನ್ ಮಸೂದೆಯನ್ನು ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಸೋಲಿಸಿದವು,ನಾರಿ ಶಕ್ತಿ ವಂದನ್ ಮಸೂದೆಗೆ ಕರಾಳ ದಿನ, ನಿಜಕ್ಕೂ ಇದು ಒಂದು ಅಘಾತಕಾರಿ ವಿದ್ಯಮಾನ ಎಂದು ಹೇಮಾ ಅವರು ತಿಳಿಸಿದ್ದಾರೆ.
ಭಾರತದ ಸರ್ವಾಂಗೀಣ ವಿಕಾಸದ ಕಾರ್ಯದಲ್ಲಿ ಶೇಕಡ 50 ಕ್ಕಿಂತ ಹೆಚ್ಚು ಇರುವ ಮಹಿಳೆಯರನ್ನು ರಾಷ್ಟ್ರ ಕಾರ್ಯದ ಜೊತೆಗೆ ರಾಷ್ಟ್ರ ನಿರ್ಮಾಣದ ಜೊತೆಗೆ ಸಹಭಾಗಿತ್ವದ ಮೂಲಕ ಬಹು ದೊಡ್ಡದಾದ ಕೊಡುಗೆಯನ್ನು ನೀಡಬೇಕೆಂದು ಪ್ರಧಾನಿ ಮೋದಿಜಿಯವರು ಸಂಕಲ್ಪ ಮಾಡಿದ್ದರು.
ಆದರೆ ಕಾಂಗ್ರೆಸ್ ಹಾಗೂ ಇತರ ಮಿತ್ರ ಪಕ್ಷಗಳು ಮಹಿಳೆಯರ ಕನಸಿಗೆ ಕೊಳ್ಳಿ ಇಟ್ಟಿದ್ದಾರೆ. ದೇಶದಲ್ಲಿ 70 ಕೋಟಿ ಮಹಿಳೆಯರ 33% ಮೀಸಲಾತಿ ತಡೆದು ಮಹಿಳೆಯರ ಹಕ್ಕನ್ನ ಕಸಿದಿದ್ದಾರೆ ಎಂದು ಹೇಮಾ ನಂದೀಶ್ ಕಿಡಿಕಾರಿದ್ದಾರೆ.
ಮಹಿಳೆಯ ಹಕ್ಕು ಸ್ವತಂತ್ರವಾಗಿ ಸಿಗಬಾರದು ಎಂಬುದು ಕಾಂಗ್ರೆಸ್ಸಿನ ಅಜಂಡಾ ಅನಿಸುತ್ತದೆ. ದಶಕಗಳಿಂದಲೂ 33% ಮಹಿಳಾ ಕಾಯ್ದೆಗೆ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್ಸಿಗೆ ರಾಜಕೀಯವಾಗಿ ಉತ್ತರ ನೀಡಲು ಮಹಿಳೆಯರು ಸಜ್ಜಾಗಬೇಕು ಎಂದು ಅವರು ಕರೆ ನೀಡಿದರು.
ಈ ನಿಟ್ಟಿನಲ್ಲಿ ಮಹಿಳೆಯರು ರಾಷ್ಟ್ರಾದ್ಯಂತ ಒಗ್ಗಟ್ಟಾಗಿ ರಾಜಕೀಯವಾಗಿ ಉತ್ತರ ಕೊಡಲು ತಯಾರಾಗಬೇಕು ಮಹಿಳೆಯರು ಜಾಗೃತರಾಗಬೇಕು, ಮಹಿಳಾ ವೇದಿಕೆಗಳು ಸಜ್ಜಾಗಬೇಕು ಎಂದು ತಿಳಿಸಿದ್ದಾರೆ.
ನಗರದಿಂದ ಗ್ರಾಮಗಳವರೆಗೆ ಮಹಿಳೆಯರು ಜಾಗೃತರಾದರೆ ರಾಜಕೀಯವಾಗಿ ಯಾರು ಮಹಿಳಾ ಶಕ್ತಿಯನ್ನು ಕಸಿದಿದ್ದಾರೆ ಅವರಿಗೆ ಉತ್ತರ ಕೊಡುವ ಕಾಲ ಬಂದಿದೆ ಇದೊಂದು ಪರ್ವಕಾಲ.
ಪ್ರಧಾನಿಗಳು ಸಾಂವಿಧಾನಿಕವಾಗಿ ಮಹಿಳಾ ಹಕ್ಕನ್ನು ಮಹಿಳೆಯರಿಗಾಗಿ ಕೊಡಲು ಇನ್ನೂ ಮುಂದುವರೆಯಲೇಬೇಕು ಡಾ. ಬಿ.ಆರ್ ಅಂಬೇಡ್ಕರ್ ಅವರ ಕನಸನ್ನು ನನಸು ಮಾಡಲೇಬೇಕು ಎಂದು ಹೇಮಾ ಮನವಿ ಮಾಡಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಕಳೆದಿದೆ ಈಗಲೂ ಮಹಿಳೆಯರನ್ನು ದ್ವಿತೀಯ ದರ್ಜೆಯಲ್ಲಿ ಕಾಣುತ್ತಿರುವ ವಿರೋಧ ಪಕ್ಷಗಳಿಗೆ ತಕ್ಕಪಾಠ ಕಲಿಸುವ ಕಾಲ ಸನ್ನಿತವಾಗಿದೆ ಎಂದು ಡಾ ಹೇಮಾ ನಂದೀಶ್
ಹೇಳಿದ್ದಾರೆ.
