ಮೈಸೂರು: ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ವಿವೇಕವಾಹಿನಿ ರಥದ ಮೂಲಕ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಪಸರಿಸಲಾಯಿತು.
ರಾಮಕೃಷ್ಣ ನಗರದ ಪರಮಹಂಸ ವೃತ್ತದ ಪ್ರತಿಮೆಯ ಬಳಿ ಬಿಜೆಪಿ ನಾಗರಾಧ್ಯಕ್ಷ ಎಲ್. ನಾಗೇಂದ್ರ ಹಾಗೂ ಶಾಸಕ ಟಿ ಎಸ್ ಶ್ರೀವತ್ಸ ಅವರು ಚಾಲನೆ ನೀಡಿದರು.
ವಿವೇಕಾನಂದರ ಭಾಷಣ, ಹಾಡುಗಳನ್ನು ಬಿತ್ತರಿಸುತ್ತಾ ರಥವು ರಾಮಕೃಷ್ಣನಗರ ಶಾರದಾದೇವಿನಗರ, ನಿವೇದಿತಾನಗರ, ಜನತಾನಗರ ಹಾಗೂ ಬೋಗಾದಿ ಬಡಾವಣೆಗಳಲ್ಲಿ ಸಂಚರಿಸಿತು.
ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ನಗರ ಮಂಡಲದ ಅಧ್ಯಕ್ಷರಾದ ರಾಕೇಶ್ ಭಟ್, ಯುವ ಮೋರ್ಚಾ ಮಂಡಲ ಅಧ್ಯಕ್ಷರಾದ ಮಧು ಸೋಮಶೇಖರ್, ನಗರ ಯುವ ಮೋರ್ಚಾ ಅಧ್ಯಕ್ಷರಾದ ರಾಕೇಶ್ ಗೌಡ, ನಗರ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ ರಘು, ರುದ್ರಮೂರ್ತಿ, ಮಂಡಲ ಪ್ರಧಾನ ಕಾರ್ಯದರ್ಶಿ ಈರೇಗೌಡ, ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸಾಗರ್ ಸಿಂಗ್, ಚಂದನ್ ಗೌಡ, ಉಪಾಧ್ಯಕ್ಷರಾದ ಸಿ ರಾಘವೇಂದ್ರ, ಸೂರ್ಯಪ್ರಕಾಶ್, ಮಧು, ಅವಿನಾಶ್, ಚೇತನ್, ಪಾಲಿಕೆ ಮಾಜಿ ಸದಸ್ಯರಾದ ಲಕ್ಷ್ಮಿ ಕಿರಣ್, ಎಂ.ಕೆ. ಶಂಕರ್, ನಗರ ವಕ್ತಾರರಾದ ಎಂ.ಎ. ಮೋಹನ್, ಮಂಡಲ ಉಪಾಧ್ಯಕ್ಷರಾದ ಹೆಚ್. ಜಿ ರಾಜಮಣಿ, ಬಿ.ಸಿ ಶಶಿಕಾಂತ್, ಶಿವು ಪಟೇಲ್, ನಗರ ಯುವ ಮೋರ್ಚಾ ಪ್ರಧಾನ ಡಿ.ಲೋಹಿತ್, ಸಚಿನ್, ಮುಖಂಡರಾದ ವಿಜಯ ಮಂಜುನಾಥ್, ಎನ್.ಪ್ರತಾಪ್, ಎಸ್. ಮಹೇಶ್ ಕುಮಾರ್, ಶುಭಶ್ರೀ, ಎ.ರಾಘವೇಂದ್ರ, ಪಿ. ಸೋಮಣ್ಣ, ರಂಗೇಶ್, ದೇವರಾಜ್, ರಾಚಪ್ಪಾಜಿ, ಕಾಂತರಾಜ ಅರಸು, ಜಯಸಿಂಹ, ಗೋಪಾಲ್ ಅಯ್ಯಂಗಾರ್, ರಮಾಬಾಯಿ, ಪುಟ್ಟಮ್ಮಣ್ಣಿ, ವಸುಮತಿ, ಕಲಾವತಿ, ತುಳಸಿ, ರಾಮಕೃಷ್ಣಪ್ಪ, ಪ್ರವೀಣ್, ರೇವಣ್ಣಸಿದ್ದಪ್ಪ ಸೇರಿದಂತೆ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
