ಮೈಸೂರು: ದಸರಾ ಮಹೋತ್ಸವ ಮತ್ತು ನವರಾತ್ರಿ ಪ್ರಯುಕ್ತ ಮೈಸೂರಿನ ಅಗ್ರಹಾರ ನವಗ್ರಹ ದೇವಸ್ಥಾನದ ಆವರಣದಲ್ಲಿರುವ ಶ್ರೀ ಪಾರ್ವತಿ ದೇವಿಗೆ ವೀಣಾಪಾಣಿ ಶಾರದೆ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು.
ತಾಯಿ ಪಾರ್ವತಿ ಕೆನೆಬಿಳುಪು ಬಣ್ಣದ ಸೀರೆ ತೊಟ್ಟು ಕೈನಲ್ಲಿ ವೀಣೆ ಹಿಡಿದು ನಗುಮುಖ ದಿಂದ ಭಕ್ತರಿಗೆ ಆಶೀರ್ವಾದ ನೀಡುತ್ತಿದ್ದಾಳೆ.
ದೇವಿ ಪಾರ್ವತಿ ಶಾರದಾಂಬೆಯಾಗಿ ಆಭರಣಗಳು, ಬೆಳ್ಳಿ ಕೈಗಳು,ಬೆಳ್ಳಿ ವಸ್ತುಗಳಿಂದ ಅಲಂಕೃತಗೊಂಡು ಕಂಗಳಿಸುತ್ತಿದ್ದಾಳೆ.
ತಾಯಿ ಪಾರ್ವತಿ ದೇವಿಯನ್ನು ದೇವಾಲಯದ ಪ್ರಧಾನ ಅರ್ಚಕ ಎಸ್ ಯೋಗಾನಂದ ಅವರ ಪತ್ರ ಅಭಿನಂದನ್ ಅವರು ಶಾರದಾಂಬೆಯಂತೆ ಸಿಂಗರಿಸಿ,ಮಹಾಪೂಜೆ ನೆರವೇರಿಸಿದರು.
ವಿವಿಧ ಹೂಗಳಿಂದ ಅಲಂಕರಿಸಿ ರಾತ್ರಿ ಮಹಾಪೂಜೆ ಮತ್ತು ಮಹಾಮಂಗಳಾರತಿ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಸುತ್ತಮುತ್ತಲಿನ ಭಕ್ತಾದಿಗಳು ಆಗಮಿಸಿ ತಾಯಿಗೆ ನಮಸ್ಕರಿಸಿದರು.
