ವಾಷಿಂಗ್ಟನ್: ವೆನೆಜುವೆಲಾ ಆಯ್ತು ಈಗ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಣ್ಣು
ಗ್ರೀನ್ ಲ್ಯಾಂಡ್ ಮೇಲೆ ಬಿದ್ದಿದೆ.
ಟ್ರಂಪ್ ಶತಾಯಗತಾಯ ಗ್ರೀನ್ ಲ್ಯಾಂಡ್
ನೆಲದಿಂದ ರಷ್ಯಾ ಬೆದರಿಕೆಯನ್ನು ಕಿತ್ತೊಗೆಯುವುದಾಗಿ ಶಪಥ ಮಾಡಿದ್ದಾರೆ.
ಗ್ರೀನ್ ಲ್ಯಾಂಡ್ ಗೆ ಹೊಸ ಎಚ್ಚರಿಕೆ ನೀಡಿರುವ ಟ್ರಂಪ್, ಬಹಳ ಹಿಂದೆಯೇ ಗ್ರೀನ್ ಲ್ಯಾಂಡ್ ಅನ್ನು ವಶಪಡಿಸಿಕೊಳ್ಳಲು ಬಯಸಲಾಗಿತ್ತು. ನನ್ನ ಆಡಳಿತದ ಎರಡನೇ ಅವಧಿಯಲ್ಲಿ, ಅದರ ಯೋಜನೆ ತೀವ್ರಗೊಂಡಿದೆ ಎಂದು ಹೇಳಿದ್ದಾರೆ.
ಟ್ರಂಪ್ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, “ನಾವು ಗ್ರೀನ್ ಲ್ಯಾಂಡ್ ನಿಂದ ರಷ್ಯಾದ ಬೆದರಿಕೆಯನ್ನು ತೆಗೆದುಹಾಕಬೇಕಾಗಿದೆ ಎಂದು ನ್ಯಾಟೋ 20 ವರ್ಷಗಳಿಂದ ಡೆನ್ಮಾರ್ಕ್ ಗೆ ಹೇಳುತ್ತಿದೆ. ದುರದೃಷ್ಟವಶಾತ್, ಡೆನ್ಮಾರ್ಕ್ ಈ ಬಗ್ಗೆ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಈಗ ಸಮಯ ಬಂದಿದೆ, ಮತ್ತು ಅದು ಪೂರ್ಣಗೊಳ್ಳುತ್ತದೆ ಎಂದು ಬರೆದಿದ್ದಾರೆ.
ಈ ಹಿಂದೆ, ಟ್ರಂಪ್ ಯುರೋಪಿಯನ್ ಒಕ್ಕೂಟದ ಎಂಟು ದೇಶಗಳ ಮೇಲೆ ಸುಂಕವನ್ನು ವಿಧಿಸುವುದಾಗಿ ಘೋಷಿಸಿದ್ದರು. ಅಮೆರಿಕವನ್ನು ಸಹ ಎದುರಿಸಲಿದೆ ಎಂದು ಐರೋಪ್ಯ ಒಕ್ಕೂಟ ಕೂಡಾ ಹೇಳಿದೆ.
