ಕೊಪ್ಪಳ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೊಪ್ಪಳ ಜಿಲ್ಲೆಯಲ್ಲಿ ಹುಲಿ ಕಾಣಿಸಿಕೊಂಡಿದ್ದು,ನಮ್ಮಲ್ಲೂ ಹುಲಿ ಕಾಣಿಸಿತಾ ಎಂದು ಜನತೆ ಭಯಾಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ ತಾಲೂಕಿನ ಬಸಾಪುರದ-ಆನೆಗೊಂದಿ ಪ್ರದೇಶದಲ್ಲಿ ಹುಲಿ ಓಡಾಟ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹುಲಿ ಇರುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕೂಡಾ ಖಚಿತ ಪಡಿಸಿದ್ದಾರೆ.
ಬಸಾಪುರ, ಸಾಣಾಪುರ, ಜಂಗ್ಗಿ ರಾಂಪುರ, ಆನೆಗೊಂದಿ ಭಾಗದಲ್ಲಿ ಹುಲಿ ಅಡ್ಡಾಡಿದೆ.
ಗಂಗಾವತಿ ತಾಲೂಕಿನ ಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಾಪುರ ತೆಂಬು ಹತ್ತಿರ ವ್ಯಘ್ರ ಕಾಣಿಸಿದ್ದು,ಬೇಟೆಯಾಡಿ ತಂದ ಪ್ರಾಣಿಯನ್ನು ತಿನ್ನುವ ದೃಶ್ಯ ಅರಣ್ಯ ಇಲಾಖೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೇರೆ ಜಿಲ್ಲೆಗಳಲ್ಲಿ ಹುಲಿಯ ಉಪಟಳ ಇರುವುದನ್ನು ಕೇಳಿದ್ದ ಜಿಲ್ಲೆಯ ಜನತೆ ಇದೀಗ ತಮ್ಮ ಜಿಲ್ಲೆಯಲ್ಲಿ ವ್ಯಾಘ್ರನ ಹೋರಾಟ ಕಂಡು ಆತಂಕದ ಜೊತೆಗೆ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ
ಹುಲಿ ಶಿವಮೊಗ್ಗ ಕಡೆಯಿಂದ ಬಂದಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಒಟ್ಟು 20 ಸಿಸಿ ಕ್ಯಾಮರಾಗಳನ್ನ ಅರಣ್ಯ ಇಲಾಖೆ ಅಳವಡಿಸಿದ್ದು ಜನರು
ಕಾಡಿಗೆ ಹೋಗದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮೈಕ್ ನಲ್ಲಿ ಬಹಿರಂಗ ಪ್ರಚಾರ ಮಾಡಿದ್ದಾರೆ ,ಮತ್ತು ಎಚ್ಚರದಿಂದ ಇರುವಂತೆ ಮನವಿ ಮಾಡಿದ್ದಾರೆ.
