ಮೈಸೂರು: ಮೈಸೂರಿನ ಶ್ರೀರಾಂಪುರದಲ್ಲಿರುವ ಮರ್ಸಿ ಕಾನ್ವೆಂಟ್ ನ ಶ್ರವಣದೋಷವುಳ್ಳ ವಿದ್ಯಾರ್ಥಿಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ಎಳ್ಳು ಬೆಲ್ಲ,ಹಣ್ಣು ಹಂಪಲು ವಿತರಿಸಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯಾದರ್ಶನ್, ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೆ ಪಸರಿಸಿದ ಅದಮ್ಯ ಚೇತನ ಸ್ವಾಮಿ ವಿವೇಕಾನಂದರು. ಯುವ ಮನಸ್ಸುಗಳ ಪ್ರೇರಣಾ ಶಕ್ತಿಯಾದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದು ಹೇಳಿದರು.
ಸ್ವಾಮಿ ವಿವೇಕಾನಂದರು ಒಬ್ಬ ಪ್ರಮುಖ ಸಮಾಜ ಸುಧಾರಕರು,ರಾಷ್ಟ್ರೀಯತೆ, ಶಿಕ್ಷಣದ ಮಹತ್ವ ಮತ್ತು ಬಡವರ ಸೇವೆಗೆ ಒತ್ತು ನೀಡಿದರು. ಅನೇಕ ಸಂದರ್ಭದಲ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದರು, ಸ್ವಾಮಿ ವಿವೇಕಾನಂದರು ನಿಜವಾಗಿಯೂ ದಂತಕತೆಯಾಗಿದ್ದಾರೆ ಎಂದು ಸ್ಮರಿಸಿದರು.
ನಾವು ಮನುಷ್ಯರಾಗಿ ಹುಟ್ಟಿದ ಮೇಲೆ ಸರಿಯಾದ ರೀತಿಯಲ್ಲಿ ಬದುಕು ಬೇಕು. ಶ್ರೇಷ್ಠತೆಯನ್ನು ಸಾಧಿಸಬೇಕು ಈ ರೀತಿಯ ಮಹಾನ್ ವ್ಯಕ್ತಿಗಳನ್ನು ಪರಿಚಯಿಸುವ ಮುಖಾಂತರ ಮಕ್ಕಳಲ್ಲಿ ಏನಾದರೂ ವಿಶೇಷತೆಯನ್ನು ಸಾಧಿಸುವ ಛಲವನ್ನು ಹುಟ್ಟು ಹಾಕಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೈಸೂರು ನಗರ ಜೆ.ಡಿ.ಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್,ಸಿಂಚನಗೌಡ (ಮಂಗಳಮುಖಿ), ವಿದ್ಯಾ, ಛಾಯ,ಗಾಯಕ ಯಶವಂತ್ ಕುಮಾರ್ , ಸುಬ್ರಮಣಿ ,ರಾಜೇಶ್ ಕುಮಾರ್, ಮಹೇಶ್ ,ದತ್ತ ಮತ್ತಿತರರು ಹಾಜರಿದ್ದರು.
