ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಅರಮನೆ ಆನೆ ಶಿಬಿರದಲ್ಲಿರುವ ದಸರಾ ಗಜಪಡೆಯ ಆರೋಗ್ಯ ತಪಾಸಣೆ ಮಾಡಲಾಯಿತು.
ಜತೆಗೆ ನಗರದ ಧನ್ವಂತರಿ ರಸ್ತೆಯಲ್ಲಿರುವ ಸರ್ಕಾರಿ ಮಾನ್ಯತೆ ಪಡೆದ ಸಾಯಿರಾಮ್ & ಕೋ. ತೂಕದ ಕೇಂದ್ರದಲ್ಲಿ ಮೂರು ದಸರಾ ಆನೆಗಳ ತೂಕ ಪರೀಕ್ಷೆ ಮಾಡಲಾಯಿತು.
ಸುಗ್ರೀವ 5,850 ಕೆ.ಜಿ ತೂಕ ದಾಖಲಿಸಿ ದಸರಾ ಪಡೆಯಲ್ಲೇ ಅತಿ ಹೆಚ್ಚು ತೂಕದ ಆನೆ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ಚಿತ್ರಾ 3,295 ಕೆ.ಜಿ, ರೂಪಾ 3,260 ಕೆ.ಜಿ ತೂಕ ಹೊಂದಿ
ದಸರಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿ 15 ದಿನಗಳಿಗೊಮ್ಮೆ ಆನೆಗಳ ತೂಕ ಮತ್ತು ಆರೋಗ್ಯ ತಪಾಸಣೆ ಕಡ್ಡಾಯವಾಗಿ ಮಾಡಲಾಗುತ್ತಿದೆ. ತೂಕದ ಆಧಾರದ ಮೇಲೆ ಆನೆಗಳಿಗೆ ನೀಡುವ ಆಹಾರ ಪ್ರಮಾಣವನ್ನು ಅರಣ್ಯ ಇಲಾಖೆಯ ಪಶುವೈದ್ಯರ ತಂಡ ನಿಗದಿಪಡಿಸುತ್ತದೆ.
ಈ ಮೂರೂ ಆನೆಗಳು ಸಂಪೂರ್ಣ ಆರೋಗ್ಯದಿಂದಿದ್ದು, ಅರಮನೆ ಆವರಣದಲ್ಲಿ ನಡೆಯುತ್ತಿರುವ ಜಂಬೂ ಸವಾರಿ ತಾಲೀಮಿನಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
