ಕೊಳ್ಳೇಗಾಲ: ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಪಂ ನ 2025-26ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು 15ನೇ ಹಣಕಾಸು ಆಯೋಗ ಸಮಾಜಿಕ ಪರಿಶೋಧನಾ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಸಮಸ್ಯೆಗಳನ್ನು ತೋಡಿಕೊಂಡರು.
ಪಂಚಾಯಿತಿ ವ್ಯಾಪ್ತಿಯ ಕೆಂಪನಪಾಳ್ಯದ ಬಾಬುಜಗಜೀವನ ರಾಮ್ ಸಮುದಾಯ ಭವನದ ಬಳಿ ಸಭೆ ನಡೆಯಿತು.
ಗ್ರಾಮಸ್ಥರ ಮನವಿಯನ್ನು ಆಲಿಸಿದ ಪಂಚಾಯ್ತಿ ಲೆಕ್ಕ ಪರಿಶೋಧನೆಯ ನೋಡಲ್ ಅಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಅವರು,
ಗ್ರಾ.ಪಂ. ಗೆ ಒಳಪಡುವ 3 ಗ್ರಾಮಗಳ ಗ್ರಾಮಸ್ಥರು ಕೇಳಿದ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಲು ಅಭಿವೃದ್ಧಿಲಫ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮ ಸಭೆಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನಲ್ಲಿ ಗ್ರಾಮದ ದೊಡ್ಡಯ್ಯನಕೆರೆ ಅಭಿವೃದ್ಧಿ ಕೆಲಸ ಮಾಡಿದ 7 ದಿನದ ಕೂಲಿ ಬಂದಿಲ್ಲ. ಈಗ ಕೇಂದ್ರ ಸರ್ಕಾರ ಯೋಜನೆ ಬದಲಿಸಿರುವ ರಾಮ್ ಜೀ ಯೋಜನೆಯಡಿಯಲ್ಲಿ 125 ದಿನ ಕೂಲಿ ಕೆಲಸ ಮತ್ತು 382 ಕೂಲಿ ಹಣ ಕೊಡಬೇಕು ಮಹಿಳೆಯರು ಒತ್ತಾಯಿಸಿದರು.
ಮುಂಗಾರು ಮಳೆಯಾಗದೆ ಅಂತರ್ಜಲ ಸಂಪೂರ್ಣ ಕುಸಿದು ಕುಡಿಯುವ ನೀರಿನ ತೊಂದರೆ ಇದೆ. ಗ್ರಾಮದಲ್ಲಿರುವ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿಲ್ಲ. ಕೂಡಲೇ ಕಾವೇರಿ ನೀರು ಪೂರೈಸಬೇಕು ಎಂದು ಮನವಿ ಮಾಡಿದರು.
ಪಂಚಾಯ್ತಿ ವತಿಯಿಂದ ಇಂಗುಗುಂಡಿ ನಿರ್ಮಾಣ ಮಾಡಲು ನೀಡಿದ ಆದೇಶದ ಮೇರೆಗೆ ಇಂಗು ಗುಂಡಿ ನಿರ್ಮಾಣ ಮಾಡಿದೆ. ಆದರೆ ಅದರ ಹಣ ಬಂದಿಲ್ಲ ಗ್ರಾಮದಲ್ಲಿ ಕೆಲವು ಕಡೆ ಮಾತ್ರ ಚರಂಡಿ ಇದೆ, ಆದರೆ ಕಸ ತೆಗೆಯಲು ಯಾರೂ ಬರಲ್ಲ, ಹಲವಾರು ಕಡೆ ಚರಂಡಿ ಮತ್ತು ರಸ್ತೆ ಇಲ್ಲ. ಮನೆ ಬಳಕೆಯ ನೀರನ್ನು ಎಲ್ಲಿಗೆ ಬಿಡಬೇಕು ಎಂದು ಗ್ರಾಮಸ್ಥರು ಪ್ರಶ್ನಿಸಿದರು.
ಗ್ರಾಮದಲ್ಲಿರುವ ಸರ್ಕಾರಿ ಶಾಲಾ ಮಕ್ಕಳಿಗೆ ಆಟ ಆಡಲು ಮೈದಾ ನ ಇಲ್ಲ. ಶಾಲೆಯ ಪಕ್ಕದಲ್ಲಿರುವ ಕೊಳ ಅಭಿವೃದ್ಧಿ ಪಡಿಸಿ ಗ್ರಾಮಕ್ಕೆ ಮೆರಗು ಬರುವಂತೆ ಮಾಡಬೇಕು. ಗ್ರಾಮದಲ್ಲಿ ಅನಧಿಕೃತ ನಾಮಫಲಕ ತೆರವು ಮಾಡಿ ಗ್ರಾಮಸ್ಥರು ಸೂಚಿಸಿದ ನಾಮಫಲಕ ನಿರ್ಮಾಣ ಮಾಡಬೇಕು,ಗ್ರಾಮದಲ್ಲಿ ಕೂಡಲೇ ಸೋಲಾರ್ ದೀಪ ಆಳವಡಿಸಿ ಎಂದು ಆಗ್ರಹಿಸಿದರು.
ಗ್ರಾಮದಲ್ಲಿರುವ ಎಲ್ಲಾ ನೀರಿನ ಟ್ಯಾಂಕ್ ಗಳನ್ನು ಕೂಡಲೇ ಸ್ವಚ್ಛಗೊಳಿಸಬೇಕು, ಶುದ್ಧವಾದ ನೀರು ಪೂರೈಕೆ ಮಾಡಬೇಕು. ಸಿದ್ದಯ್ಯನ ಪುರದಲ್ಲಿ ಹೊಸ ಸರ್ಕಾರಿ ಶಾಲೆ ಆರಂಭ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಶಾಲೆ ಆರಂಭವಾಗಲಿದೆ. ಗ್ರಾಮಸ್ಥರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ಮಂಜುಳಾ ತಿಳಿಸಿದರು.
ಸಭೆಯಲ್ಲಿ ಅರಣ್ಯ ಅಧಿಕಾರಿ ಪ್ರಕಾಶ್ ಕುಮಾರ್ ಮುಖ್ಯ ಶಿಕ್ಷಕ ಕೆಂಪರಾಜು.ಸಿಬಂದಿ ವರ್ಗ ಹಾಗೂ ಗ್ರಾಮಸ್ಥರು ಹಾಗೂ ಇತರರು ಇದ್ದರು.
