ಮೈಸೂರು: ಮೈಸೂರಿನ ಕೆ.ಆರ್ ಕ್ಷೇತ್ರದ ಹೃದಯ ಭಾಗ ನಂಜುಮಳಿಗೆಯಿಂದ ಚಾಮುಂಡಿಪುರಂ ಹೋಗುವ ರಸ್ತೆಯಲ್ಲಿ ಕನಕ ಭವನ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿದ್ದು ಶಾಸಕ ಟಿ ಎಸ್ ಶ್ರೀವತ್ಸ ಸ್ಥಳೀಯ ಪ್ರಮುಖರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಶಾಸಕರು ಒಂಬತ್ತು ವರ್ಷದ ಹಿಂದೆ ಕನಕ ಭವನ ನಿರ್ಮಾಣಕ್ಕಾಗಿ ಅಂದಿನ ನಗರಪಾಲಿಕೆ ಅನುದಾನವನ್ನು ಬಿಡುಗಡೆ ಮಾಡಿದೆ,ಅದೇನಾಯ್ತು ಕಾಮಗಾರಿ ಪ್ರಾರಂಭವಾದರೂ ನಂತರ ನಿನೆಗುದಿಗೆ ಬಿದ್ದಿದೆ ಎಂದು ತಿಳಿಸಿದರು.
ಈ ವಿಷಯವನ್ನು ಹಿರಿಯರಾದ ಬಸವರಾಜ್ ಬಸಪ್ಪ ಅವರು ನನ್ನ ಗಮನಕ್ಕೆ ತಂದುದರಿಂದ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಇಲ್ಲಿನ ಸಾಧಕ ಪಾದಕಗಳನ್ನು ಪರಿಶೀಲಿಸಿ ಯುದ್ದದೋಪಾದಿಯಲ್ಲಿ ಕಾಮಗಾರಿ ಪ್ರಾರಂಭಿಸಿ ಮುಂದಿನ ಕನಕ ಜಯಂತಿ ವೇಳೆಗೆ ಲೋಕಾರ್ಪಣೆ ಮಾಡುವುದಾಗಿ ಶ್ರೀವತ್ಸ ಭರವಸೆ ನೀಡಿದರು.
ಏಕೆಂದರೆ ಕಟ್ಟಡದ ಸ್ಟ್ರೆಂತ್ ನೋಡಬೇಕು ಎಸ್ಟಿಮೇಟ್ ಹಾಕಿದ್ದು ಯಾರು ಪ್ಲಾನ್ ಮಾಡಿದ್ದು ಯಾರು ಎಂಬುದನ್ನು ಎಲ್ಲ ಪರಿಶೀಲಿಸಿ ನಂತರ ಸಮುದಾಯದವರ ಬೇಡಿಕೆಯಂತೆ ಮುಂದಿನ ವಾಲ್ಮೀಕಿ ಜಯಂತಿಯೊಳಗೆ ಕಟ್ಟಡ ಪೂರ್ಣಗೊಳಿಸಲು ಶ್ರಮಿಸಲಾಗುವುದು ಎಂದು ಶಾಸಕರು ತಿಳಿಸಿದರು.
