ಮೈಸೂರು: ಹಿಂದೂ ಮಹಿಳೆಯರನ್ನು ಮದುವೆಯಾಗಿ ಮತ್ತೆ ಕೆಲ ವರ್ಷಗಳ ನಂತರ ತಲಾಕ್ ನೀಡುವ ಮೂಲಕ ಹಿಂದೂ ಹೆಣ್ಣುಮಕ್ಕಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಚಿತ್ರನಟ ಅಮೀರ್ ಖಾನ್ ಚಿತ್ರಗಳನ್ನು ಬಹಿಷ್ಕರಿಸಬೇಕು ಎಂದು ಹಿಂದೂ ಪರ ಮುಖಂಡರಾದ ಡಾ. ಹೇಮಾನಂದೀಶ್ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಕಾಯ್ದೆ ಏಕೆ ಜಾರಿಯಾಗಬೇಕು ಎಂಬುದಕ್ಕೆ ವ್ಯವಸ್ಥಿತವಾಗಿ ಲವ್ ಜಿಹಾದ್ ಎಸಗುತ್ತಿರುವ ಆಮೀರ್ ಖಾನ್ ಒಂದು ದೊಡ್ಡ ಉದಾಹರಣೆ ಎಂದು ಅವರು ಹೇಳಿದ್ದಾರೆ.
ಅಮೀರ್ ಖಾನ್ ಇಸ್ಲಾಮಿನ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಈತ ತಲಾಕ್ ನೀಡಿದ ಬಳಿಕ ಯಾವ ಒತ್ತಡಕ್ಕೆ ಒಳಗಾಗಿ ಆ ಹೆಣ್ಣು ಮಕ್ಕಳು ಮೌನವಾಗಿದ್ದಾರೆ ಎಂಬುದನ್ನು ಹಿಂದೂ ಸಮಾಜ ತಿಳಿದುಕೊಳ್ಳಬೇಕಾಗಿದೆ. ಹಿಂದೂ ಹೆಣ್ಣು ಮಕ್ಕಳನ್ನು ಮದುವೆಯಾಗುವುದು ಹಾಗೂ ಅವರಿಗೆ ಮಕ್ಕಳಾದ ತಕ್ಷಣ ಅವರನ್ನು ಇಸ್ಲಾಂ ಧರ್ಮದ ಪದ್ಧತಿಯಂತೆ ಹೆಸರಿಡುವುದು, ಮುಸ್ಲಿಂ ಜನಸಂಖ್ಯೆ ಹೆಚ್ಚಿಸುವುದು, ಇವೆಲ್ಲವೂ ವ್ಯವಸ್ಥಿತ ಷಡ್ಯಂತ್ರವೇ ಆಗಿದೆ ಎಂದು ಡಾ.ಹೇಮಾ ನಂದೀಶ್ ಆರೋಪಿಸಿದ್ದಾರೆ.
ಅಮೀರ್ ಖಾನ್ ತಮ್ಮ ಜೀವನದಲ್ಲಿ ಮೂರು ಮದುವೆ ಮಾಡಿಕೊಂಡಿದ್ದಾನೆ. ಆ ಮೂವರು ಪತ್ನಿಯರು ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಎಲ್ಲ ಶಾಲಾಕಾಲೇಜುಗಳಲ್ಲಿ ಹಿಂದೂ ಸಭೆ ಸಮಾರಂಭಗಳಲ್ಲಿ ಇದರ ಕುರಿತಾಗಿ ಜಾಗೃತಿ ಮೂಡಿಸಲಾಗುವುದು, ಸಮಸ್ತ ಹಿಂದೂಗಳು ಜಾಗೃತರಾಗಿ ತಕ್ಷಣ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದ್ದಾರೆ.
