ಮೈಸೂರು: ಪ್ಲಾಸ್ಟಿಕ್ ಮುಕ್ತ ದೇಶವನ್ನಾಗಿಸಲು ಮನೆಗೊಂದು ಮರ ಬೆಳೆಸುವ ಮೂಲಕ ಪ್ರತಿಯೊಬ್ಬರೂ ಪರಿಸರವನ್ನು ಉಳಿಸಿ ರಕ್ಷಿಸಬೇಕೆಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಕರೆ ನೀಡಿದರು.
ಮೈಸೂರಿನ ಚಾಮುಂಡಿಪುರಂನಲ್ಲಿರುವ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಅರಿವು ಸಂಸ್ಥೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರದ ಬಗ್ಗೆ ಕಾಳಜಿ ಹೊಂದಿರುವ ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್,
ಕಡಕೋಳ ಪಟ್ಟಣ ಪಂಚಾಯತ್ ಆರೋಗ್ಯ ನಿರೀಕ್ಷಕರಾದ ಮಂಜುನಾಥ್ ,ಪರಿಸರ ಪ್ರೇಮಿ ಕೃಷ್ಣಪ್ಪ (ಘಂಟಯ್ಯ),ಪರಿಸರ ಸ್ನೇಹಿ ತಂಡದ ಅಧ್ಯಕ್ಷ ಲೋಹಿತ್,ಗಗನ್ ಗೌಡ, ಅವರಿಗೆ ಸನ್ಮಾನಿಸಿ ಪರಿಸರ ಪ್ರೇಮಿ ಪ್ರಶಸ್ತಿ ನೀಡಿ,ಗೌರವಿಸಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಧಕ್ಕೆಯಾಗುತ್ತಿದೆ,ಇದು ಗಿತ್ತಿದ್ದರೂ ವಿದ್ಯಾವಂತರೇ ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಪರಿಸರದ ಮಹತ್ವ ತಿಳಿದಿದ್ದರೂ ಅನಕ್ಷರಸ್ಥರ ರೀತಿಯಲ್ಲಿ ಪರಿಸರವನ್ನು ನಾಶ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಾವೆಲ್ಲರೂ ಪರಿಸರವನ್ನು ಕಾಪಾಡಿ, ಅದನ್ನು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು ಎಂದು ನಾರಾಯಣಗೌಡ ತಿಳಿಸಿದರು.
ಹಿರಿಯ ಸಮಾಜ ಸೇವಕ ಕೆ ರಘುರಾಮ ವಾಜಪೇಯಿ ಮಾತನಾಡಿ,ಗಿಡ ಬೆಳೆಸಿ ನಾಡು
ಬೆಳೆಸಿ, ఎంబ ಘೋಷಣೆ ವಾಸ್ತವದಲ್ಲಿ ಜಾರಿಯಾಗಬೇಕು, ನಾವು ಇರುವ ಜಾಗದ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು ಎಂದು ಹೇಳಿದರು.
ನಾವಿರುವ ಸುತ್ತಮುತ್ತಲ ಜಾಗದಲ್ಲಿ ಹಸಿರು ಇರುವ ರೀತಿ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಬೇಕು ಎಂದು ತಿಳಿಸಿದರು.
ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷರಾದ ಕೆ ಬಿ ಲಿಂಗರಾಜ, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಮುಖಂಡರಾದ ನಜರ್ಬಾದ್ ನಟರಾಜ್, ಕೆಆರ್ ಬ್ಯಾಂಕ್ ಅಧ್ಯಕ್ಷರಾದ ಬಸವರಾಜ್ ಬಸಪ್ಪ, ಕೇಬಲ್ ಮಹೇಶ್, ಜಿ ರಾಘವೇಂದ್ರ, ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ ಕಶ್ಯಪ್, ಎಸ್ ಎನ್ ರಾಜೇಶ್, ರಾಕೇಶ್, ಸುರೇಂದ್ರ, ಪುರುಷೋತ್ತಮ್, ನವೀನ್ ಕೆಂಪಿ ಮತ್ತಿತರರು ಹಾಜರಿದ್ದರು.
