ಪಿರಿಯಾಪಟ್ಟಣ,ಮಾ.1: ಪಿರಿಯಾಪಟ್ಟಣ ತಾಲೂಕಿನ ಮಾಕೋಡು ಗ್ರಾಮದಲ್ಲಿ ಸರ್ವಜ್ಞ ಜಯಂತಿಯನ್ನು ಕುಂಬಾರ ಸಂಘ ಸೇರಿದಂತೆ ಗ್ರಾಮದ ಮುಖಂಡರು ವಿವಿಧ ಸಂಘಗಳು ಸೇರಿ ಅದ್ದೂರಿಯಾಗಿ ಆಚರಿಸಲಾಯಿತು.
ಈ ವೇಳೆ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಕುಂಬಾರರ ಚಕ್ರಕ್ಕೆ ಮಡಿಕೆ ಮಾಡುವ ಮೂಲಕ ಚಾಲನೆಯನ್ನು ನೀಡಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಸೋಮಶೇಖರ್, ಹುಣಸೂರು ತಾಲೂಕಿನ ಅಧ್ಯಕ್ಷ ಸಣ್ಣಶಟ್ಟಿ, ಕುಲಾಲ ಗುಂಡ ಬ್ರಹ್ಮ ಸಂಘದ ಉಪಾಧ್ಯಕ್ಷರು ವಿಷ್ಣುವರ್ಧನ್, ಗ್ರಾಮದ ಮುಖಂಡರಾದ ಶ್ರೀಧರ ಶೆಟ್ಟಿ, ರಂಗಶೆಟ್ಟಿ,ಕೆ ಪಿ ಸ್ವಾಮಿ ಶೆಟ್ಟಿ, ವೆಂಕಟೇಶ್ ಕೊಣಸೂರು, ಶಿವರಾಜ್, ಪ್ರಭು, ಮಾಕೊಡು ಬಸವರಾಜ್, ಕೃಷ್ಣಮೂರ್ತಿ, ದೇವಶೆಟ್ಟಿ, ರಮೇಶ್, ಮಾಕೊಡ ಮಹದೇವ್, ರಾಮಶೆಟ್ಟಿ, ಮಹಾದೇವಶೆಟ್ಟಿ, ಕೊಪ್ಪ ರಾಮಚಂದ್ರ ಶೆಟ್ಟಿ, ತಿರುಮಲಾಪುರ ರಮೇಶ್ ಮತ್ತಿತರರು ಭಾಗಿಯಾಗಿದ್ದರು.
