ಸರಗೂರು: ಸರಗೂರಿನ ಸಾರ್ವಜನಿಕ ಆಸ್ಪತ್ರೆಗೆ ತುರ್ಥಾಗಿ ವೈದ್ಯರನ್ನು ನೇಮಿಸುವ ಅತ್ಯಗತ್ಯವಿದೆ.
ಏಕೆಂದರೆ ನಿನ್ನೆ ಮಧ್ಯಾಹ್ನ 12.30 ರ ಸಮಯದಲ್ಲಿ ಯುವಕನೊಬ್ಬ ಜೇನು ನೊಣಗಳ ಕಡಿತದಿಂದ ಮೃತಪಟ್ಟಿದ್ದಾನೆ ಆತನನ್ನು ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಿಸಿ ನಂತರ ಸಾರ್ವಜನಿಕ ಆಸ್ಪತ್ರೆಗೆ ತಂದು ಇಡಲಾಗಿತ್ತು.
ಈ ಆಸ್ಪತ್ರೆಯಲ್ಲಿ ಇರುವುದು ಒಬ್ಬರೇ ವೈದ್ಯರು. ಹಾಗಾಗಿ ರೋಗಿಗಳ ತಪಾಸಣೆ ಮಾಡಲು ಮತ್ತು ಹೀಗೆ ಅನಿರೀಕ್ಷಿತವಾಗಿ ಸಾವು ನೋವು ಆದಾಗ ಅಂತವರನ್ನು ನೋಡಲು, ಪೋಸ್ಟ್ ಮಾರ್ಟಮ್ ಮಾಡಲು ಒಬ್ಬರೇ ವೈದ್ಯರಿಂದ ಸಾಧ್ಯವಾಗಲಾರದು.
ನಿನ್ನೆ 12.30 ರಲ್ಲಿ ಎಚ್ ಡಿ ಕೋಟೆ ತಾಲೂಕು ಕೋಳಗಾಲದ ಸೋಮಣ್ಣ ಎಂಬವರ ಮಗ ಸುನಿಲ್ ಎಸ್ ಎಂಬ ಯುವಕ ಜೇನುನೊಣಗಳ ಕಡಿತದಿಂಸ ಸಾವಿಗೀಡಾಗಿದ್ದಾನೆ. ಆದರೆ ಆತನ ಪೋಸ್ಟ್ ಮಾರ್ಟಂ ಮಾಡಲು ಇಂದು ಮಧ್ಯಾಹ್ನದ ವರೆಗೂ ಸಾಧ್ಯವಾಗಿರಲಿಲ್ಲ ಹಾಗಾಗಿ ಈ ಆಸ್ಪತ್ರೆಗೆ ಮೊದಲು ಅತ್ಯಗತ್ಯವಾಗಿ ಇನ್ನು ಒಂದಿಬ್ಬರು ವೈದ್ಯರನ್ನು ನೇಮಿಸಬೇಕು ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅದೂ ನಮ್ಮ ಪಕ್ಷದ ವತಿಯಿಂದ ಆಸ್ಪತ್ರೆ ಬಳಿ ಹೋಗಿ ಇನ್ನೂ ಯುವಕನ ಪೋಸ್ಟ್ ಮಾರ್ಟಂ ಮಾಡಿಲ್ಲ ಎಂದು ಗಲಾಟೆ ಮಾಡಿದ ನಂತರ ವೈದ್ಯರು ಪೋಸ್ಟ್ ಮಾರ್ಟ ಮಾಡಲು ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
