ಮೈಸೂರು: ವಿಧಾನ ಪರಿಷತ್ ನೂತನ ಸದಸ್ಯರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ವಿನಯ್ ಕಾರ್ತಿಕ್ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದರು.
ನಂತರ ನಜರ್ಬಾದ್ ನಲ್ಲಿರುವ ಅವರ ತಾತ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಸಾಹುಕಾರ್ ಚೆನ್ನಯ್ಯ ಅವರ ನಿವಾಸಕ್ಕೆ ತೆರಳಿ ಸಾಹುಕಾರ್ ಚೆನ್ನಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅವರ ತಾತ ಸಾಹುಕಾರ್ ಚನ್ನಯ್ಯನವರನ್ನು ವಿನಯ್ ಸ್ಮರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ ಶೀನಾಥ್ ಬಾಬು, ಅಬ್ಬು ಜಾಕೆರಿಯಾ, ಶಶಾಂಕ್, ಕೃಷ್ಣ, ಮಂಜೇಶ್ ಎಂ ಕೆ ಅಶೋಕ್, ವರದರಾಜ್, ಪ್ರಕಾಶ್, ಜಿ ರಾಘವೇಂದ್ರ, ಹರೀಶ್ ನಾಯ್ಡು, ಎಸ್ ಎನ್ ರಾಜೇಶ್,ಕೆಜಿ ಕೊಪ್ಪಲ್ ಜಯಪ್ರಕಾಶ್( ಜೆಪಿ), ಕಿರಣ್, ಯೋಗೇಶ, ಮೋಹನ್ ಮತ್ತಿತರರು ಹಾಜರಿದ್ದರು.
