ಗುವಾಹಟಿ: ಅಸ್ಸಾಂನ ಗುವಾಹಟಿಯ ಬೋರಾ ಸರ್ವಿಸ್ ಪ್ರದೇಶದಲ್ಲಿರುವ ಹೋಟೆಲ್ ಬಿಲಾಸ್ ಇನ್ ಬಳಿ ಸೋಮವಾರ ರಾತ್ರಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಆರು ಮಂದಿ ಬಲಿಯಾಗಿದ್ದಾರೆ.
ಗುವಾಹಟಿಯ ಉಲುಬಾರಿ ಅಥವಾ ಬೋರಾ ಸರ್ವಿಸ್ ಪ್ರದೇಶದ ‘ಹೋಟೆಲ್ ಬಿಲಾಸ್ ಇನ್’ ಪಕ್ಕದ ಗಲ್ಲಿಯಲ್ಲಿ ಈ ಘಟನೆ ನಡೆದಿದೆ.
ದುಷ್ಕರ್ಮಿಗಳು ನಡೆಸಿದ ಈ ಶೂಟೌಟ್ನಲ್ಲಿ ಮಹಿಳೆಯೂ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತರ ಪೈಕಿ ನಾರಾಯಣ್ ದಾಸ್ (48) ಮತ್ತು ಚೈತನ್ಯ ಪಾಠಕ್ ಎಂಬವರನ್ನು ಗುರುತಿಸಲಾಗಿದೆ.
ಹೋಟೆಲ್ ನೌಕರರು ಸೇರಿದಂತೆ ಹಲವರು ಗುಂಡೇಟಿನಿಂದ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಗುವಾಹಟಿ ಪೊಲೀಸ್ ಕಮಿಷನರ್ ಪಾರ್ಥಸಾರಥಿ ಮಹಾಂತ ಹಾಗೂ ಫೋರೆನ್ಸಿಕ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ದಾಳಿ ನಡೆಸಿ ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಈ ದುರ್ಘಟನೆ ಗೆ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.
