ಮೈಸೂರು: ಬಾಲ್ಯದಲ್ಲಿಯೇ ಮಕ್ಕಳಿಗೆ ಧಾರ್ಮಿಕತೆಯ ವಿಧಿ ವಿಧಾನಗಳನ್ನು ತಿಳಿಸಿಕೊಟ್ಟು ಅವರನ್ನು ಸಮಾಜದಲ್ಲಿ ಸಂಸ್ಕಾರವಂತರನಾಗಿಸುವ ಕರ್ತವ್ಯ ಹೆತ್ತವರದಾಗಿದೆ ಎಂದು ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷರಾದ ರವಿ ಶಾಸ್ತ್ರಿ ಹೇಳಿದರು.
ನಗರದ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣ ಧಾಮದಲ್ಲಿ ಶ್ರೀ ಕೃಷ್ಣ ಟ್ರಸ್ಟ್ ಹಾಗೂ ಶ್ರೀ ಕೃಷ್ಣ ಮಿತ್ರ ಮಂಡಳಿ ವತಿಯಿಂದ ಹಮ್ಮಿಕೊಂಡಿರುವ 15 ದಿನದ ಧಾರ್ಮಿಕ ಬೇಸಿಗೆ ಶಿಬಿರ (7 ವರ್ಷದಿಂದ 14 ವರ್ಷದ ಬಾಲಕ ಬಾಲಕಿಯರಿಗೆ ಸಂಧ್ಯಾವಂದನೆ, ದೇವರ ನಾಮ, ಶ್ಲೋಕಗಳು, ಭಜನೆ, ನೀತಿ ಕಥೆ ) ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ಧಾರ್ಮಿಕ ಚಿಂತನೆ ಅಗತ್ಯ, ಬಾಲ್ಯದಿಂದಲೇ ದೇವರ ಬಗ್ಗೆ ನಂಬಿಕೆ ಹಾಗೂ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು,
ಎಂದು ಹೇಳಿದರು.
ರಜಾ ದಿನಗಳಲ್ಲಿ ಮಕ್ಕಳು ಮೊಬೈಲ್, ಟಿ.ವಿಯಲ್ಲಿ ಕಳೆದು ಹೋಗುತ್ತಿದ್ದಾರೆ. ಹಾಗಾಗಿ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಸಂಸ್ಕಾರದ ಬೀಜ ಬಿತ್ತಿ, ದೇಶದ ಸುಸಂಸ್ಕೃತ ಪ್ರಜೆಗಳನ್ನಾಗಿಸುವ ಉದ್ದೇಶದಿಂದ ಶಿಬಿರ ಆಯೋಜಿಸಿದ್ದೇವೆ ಎಂದು ರವಿ ಶಾಸ್ತ್ರಿ ತಿಳಿಸಿದರು.
ವಿದ್ವಾನ್ ವರಖ್ಕೇಡಿ ಆಚಾರ್ಯರು,
ವಿದ್ಯಾಪೀಠ ಸಂಚಾಲಕರಾದ ವಿದ್ವಾನ್ ಯದುನಂದನ್ ಅಚಾರ್ಯರು,
ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷರುಗಳಾದ
ರವಿಶಾಸ್ತ್ರಿ, ಪಿ ಎಸ್ ಶೇಖರ್, ಶ್ರೀ ಕೃಷ್ಣ ಮಿತ್ರ ಮಂಡಳಿಯ ಅಧ್ಯಕ್ಷರಾದ ಎನ್ ಗೋಪಾಲಕೃಷ್ಣನ್ ಕಾರ್ಯದರ್ಶಿ ಗುರುಪ್ರಸಾದ್,ಪ್ರಾಧ್ಯಾಪಕರಗಳಾದ
ವಿದ್ವಾನ್ ಶ್ರೀಕಾಂತ ಆಚಾರ್ಯರು, ಮಂಗಳಾಳೋ ಅಭ್ಯಂಕರ್,
ವಿದ್ವಾನ್ ಮಾನ್ಯ ಆಚಾರ್ಯರು, ಶ್ರೀಹರಿ ಆಚಾರ್ಯರು, ರೋಹಿತ್ ಆಚಾರ್ಯರು, ಹಾಗೂ ಪೋಷಕರು ಹಾಜರಿದ್ದರು.
