ಮೈಸೂರು: ರಾಘವೇಂದ್ರ ಸ್ವಾಮಿಗಳು ಸರ್ವಕಾಲಕ್ಕೂ ಪವಾಡಪುರುಷ,ಅವರು ರಚಿಸಿದ 51 ಅಪೂರ್ವ ಗ್ರಂಥಗಳೇ ಇದಕ್ಕೆ ಸಾಕ್ಷಿ ಎಂದು ಉದ್ಯಮಿ ರಾಜೇಶ್ ಪಳನಿ ತಿಳಿಸಿದರು.
ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠ ದಲ್ಲಿ
ಶ್ರೀ ಸುಶಮಿಂದ್ರತೀರ್ಥ ಸೇವಾ ಸಮಿತಿ ವತಿಯಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 431ನೇ ವರ್ಧಂತಿ ಮಹೋತ್ಸವ ಅಂಗವಾಗಿ ಭಕ್ತರಿಗೆ ಏರ್ಪಡಿಸಿದ್ದ ಅನ್ನಸಂತರ್ಪಣೆ ಕಾರ್ಯಕ್ಕೆಚಾಲನೆ ನೀಡಿ ಅವರು ಮಾತನಾಡಿದರು.
ರಾಯರ ವೃಂದಾವನ ಮಾಡಿದ ಸ್ಥಳ ಜಾತಿ ಭೇದವಿಲ್ಲದೆ ಎಲ್ಲರನ್ನೂ ಉದ್ಧಾರ ಮಾಡುತ್ತಿದೆ, ಅವರ ಪವಾಡಗಳು ಆ ಕಾಲಕ್ಕೆ ಮಾತ್ರ ಸೀಮಿತವಾಗಿಲ್ಲ, ದೇಶಾದ್ಯಂತ ಸಂಚರಿಸಿ ಪಾಠ ಪ್ರವಚನ ಮಾಡಿದ್ದಾರೆ, ಅವರು ರಚಿಸಿದ ಗ್ರಂಥಗಳಿಂದ ಜ್ಞಾನದ ಶ್ರೀಮಂತಿಕೆ ಲಭಿಸಿದೆ ಎಂದು ಹೇಳಿದರು.
ರಾಯರ ಮಠವು ಲೌಕಿಕ ವಾಗಿ ಮಾತ್ರವಲ್ಲ ಭಕ್ತರ ನಂಬಿಕೆಯ ದೃಷ್ಟಿಯಿಂದಲೂ ಶ್ರೀಮಂತವಾಗಿದೆ, ಮಠವು ಇನ್ನೂ ಹೆಚ್ಚಿನ ಧಾರ್ಮಿಕ ಕಾರ್ಯಗಳ ಮೂಲಕ ನಾಡಿನ ಸುಭಿಕ್ಷೆಗೆ ಕಾರಣವಾಗಲಿ ಎಂದು ರಾಜೇಶ್ ಪಳನಿ ಹಾರಿಸಿದರು.
ಈ ಸಂದರ್ಭದಲ್ಲಿ ಶ್ರೀ ಸುಶಮೀಂದ್ರ ತೀರ್ಥ ಸೇವಾ ಸಮಿತಿಯ ನಾಗರಾಜ್, ವರುಣ ಮಹಾದೇವ್, ಓಂಕಾರ್ ಆನಂದ್, ಕಿರಣ, ರಾಜೇಶ್ ಪಲನಿ, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ಎಂ.ಡಿ ಪಾರ್ಥಸಾರಥಿ, ಜಿ ಎಮ್ ಪಂಚಾಕ್ಷರಿ, ಶೇಖರ್, ಎಸ್ ಎನ್ ರಾಜೇಶ್,ಡೈರಿ ವೆಂಕಟೇಶ್, ಇಡ್ಲಿ ಸ್ವಾಮಿ,
ಮತ್ತಿತರರು ಹಾಜರಿದ್ದರು.
