ಪಿರಿಯಾಪಟ್ಟಣ: ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಇಂದು ಬೆಳಗ್ಗೆ ಸಭೆ ಹಮ್ಮಿಕೊಂಡು ಮಳೆಕೊರತೆ,ಬರಗಾಲ ಮತ್ತಿತರ ಸಮಸ್ಯೆ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಆರ್ ಸೋಮೇಗೌಡ ಅವರು ಮಾತನಾಡಿ ಇದೇ 21 ರಂದು ಮಂಗಳವಾರ ರೈತ ಸಂಘದ ಮುಖಂಡರಾದ ಪ್ರೊಫೆಸರ್ ನಂಜುಂಡಸ್ವಾಮಿ ಅವರ ಹುತಾತ್ಮ ದಿನವನ್ನು ಆಚರಿಸಲಾಗುವುದು ಎಂದು ತಿಳಿಸಿದರು.
ರೈತರು ಮಳೆ ಇಲ್ಲದೆ ಬರಗಾಲ ಎದುರಿಸುವ ಪರಿಸ್ಥಿತಿ ಬಂದಿದೆ ಆದುದರಿಂದ ಸರ್ಕಾರಕ್ಕೆ ಪರಿಹಾರಕ್ಕಾಗಿ ಒತ್ತಾಯ ಮಾಡಬೇಕು
ಎಂದು ತಿಳಿಸಿದರು.
ಸಭೆಯಲ್ಲಿ ಯುವ ಘಟಕದ ಅಧ್ಯಕ್ಷ ಮಹದೇವ್, ರವಿ, ಮಹಿಳಾ ತಾಲೂಕು ಅಧ್ಯಕ್ಷರಾದ ಕಾವೇರಮ್ಮ, ಬೈಂದರ ಮನೆ ಪ್ರಭು, ಪ್ರಕಾಶ್, ನಾಗೇಂದ್ರ, ಕೊಣಸೂರ್ ಶಿವರಾಜು, ಕೆ ಬಿ ಮೂರ್ತಿ, ಶಶಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
