ಮೈಸೂರು: ಜೆಪಿ ನಗರದಲ್ಲಿ ಅನಾಥ ಹಿರಿಯ ನಾಗರಿಕರಿಗೆ ಹಾಗೂ ಅನಾಥ ಮಕ್ಕಳಿಗೆ ಉಚಿತವಾಗಿ ಆಶ್ರಯ ನೀಡುವ ವೃದ್ಧಾಶ್ರಮವನ್ನು ಪರಿವರ್ತನಮ್ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರಾರಂಬಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷರಾದ ಎಚ್ಎನ್ ಶ್ರೀಧರ್ ಮೂರ್ತಿ ಅವರು, ಪರಿವರ್ತನಂ ಟ್ರಸ್ಟ್ ಸುಮಾರು ಹದಿನೈದು ವರ್ಷದಿಂದ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡು ಸೇವೆ ಮಾಡುತ್ತಾ ಬಂದಿದೆ,ಈಗ ನಿರಾಶ್ರಿತರಿಗೆ ಊಟ ವಸತಿ ನೀಡುವ ಸದುದ್ದೇಶದಿಂದ ವೃದ್ದಾಶ್ರಮ ಮತ್ತು ಅನಾಥಾಶ್ರಮ ಜೆಪಿ ನಗರದಲ್ಲಿ ಪ್ರಾರಂಭಿಸಿರುವುದು ಬಹಳ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಸಮಾರಂಭಗಳಲ್ಲಿ ಉಳಿದ ಆಹಾರ ಪದಾರ್ಥಗಳನ್ನು ಕಲೆಹಾಕಿ ಹಸಿದವರಿಗೆ ನೀಡುವ ಕಾರ್ಯಕ್ರಮವನ್ನೂ ಸಹ ಪರಿವರ್ತನಂ ಟ್ರಸ್ಟ್ನವರು ಕೈಗೆತ್ತಿಕೊಂಡಲ್ಲಿ ನಾವೂ ಸಹ ಕೈ ಜೋಡಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕರಾದ ವೀಣಾ, ಸಿ ಎಸ್ ರಘು, ವಿಕ್ರಂ ಅಯ್ಯಂಗಾರ್, ಪರಿವರ್ತನಮ್ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳಾದ ವಿನಯ್ ಕಣಗಾಲ್, ಪವನ್, ಸತೀಶ್ ಕುಮಾರ್, ಕೆ ಎಸ್ ಮಮತಾ, ರವಿಕುಮಾರ್, ಶರಣ್ ಸಿ ಎಸ್, ರಾಕೇಶ್ ಮತ್ತಿತರರು ಹಾಜರಿದ್ದರು.
