ಪಿರಿಯಾಪಟ್ಟಣ: ತಂಬಾಕಿಗೆ ಒಂದೇ ತರದ ಗ್ರೇಡಿಗೆ ಎರಡು ಮೂರು ತರ ದರ ನಿಗದಿ ಮಾಡಿದರೆ ರೈತಸಂಘ-ಹಸಿರು ಸೇನೆ ತೀವ್ರ ಹೋರಾಟ ಮಾಡುತ್ತದೆ ಎಂದು ಸಂಘದ ರಾಜ್ಯಾಧ್ಯಕ್ಷರಾದ ಆರ್ ಮಂಜುನಾಥ್ ಗೌಡ ಎಚ್ಚರಿಸಿದರು.
ತಂಬಾಕು ಹರಾಜು ಪ್ರತಿಕ್ರಿಯೆ ಆರಂಭದ ಉದ್ಘಾಟನೆ ವೇಳೆ ಮಾತನಾಡಿದ ಅವರು,
ಈ ದಿನ ಕೇಜಿಗೆ ಬೆಲೆ 270 ರೂ ಕೊಡುತ್ತಿದ್ದು ಇದಕ್ಕೆ ಒಂದೇ ತರದ ಗ್ರೇಡಿ ಗೆ ಎರಡು ಮೂರು ತರ ದರವನ್ನು ನಿಗದಿ ಮಾಡಬಾರದು ಎಂದು ತಂಬಾಕು ಮಂಡಳಿಯನ್ನು ಒತ್ತಾಯಿಸಿದರು.
ಬ್ಲೂ ಇಂಡಿಯಾ ಪಾರ್ಟಿ ಅಧ್ಯಕ್ಷ ರಾಜಶೇಖರ್ ದೊಡ್ಡಣ್ಣ ಮೌರ್ಯ ಅವರು ಮಾತನಾಡಿ, ತಂಬಾಕು ಮಂಡಳಿಯು ಬೇಜವಾಬ್ದಾರಿ ತನ ತೋರಬಾರದು ಎಂದು ಹೇಳಿದರು.
ರೈತರಿಗೆ ಮಾರುಕಟ್ಟೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ತಂಬಾಕು ಹರಾಜು ಮಾರುಕಟ್ಟೆಯ ಸೂಪರಿಡೆಂಟ್ ಸವಿತಾ ಮತ್ತು ಸಿಬ್ಬಂದಿ ಮತ್ತು ಮಹಿಳಾ ಅಧ್ಯಕ್ಷರಾದ ಕಾವೇರಮ್ಮ ಬೈಲ ಮನೆ, ತಾಲೂಕು ಯುವ ಘಟಕದ ಉಪಾಧ್ಯಕ್ಷರಾದ ನಾಗೇಂದ್ರ, ರಾಜ್ಯ ಸದಸ್ಯರಾದ ದೇವಶೆಟ್ಟಿ, ತಾಲೂಕು ಸಂಚಾಲಕರಾದ ಕೊಣಸೂರು ಶಿವರಾಜು, ಚೇತನ್ ಸ್ವಾಮಿ ಗೌಡ ಮತ್ತು ರೈತ ಮುಖಂಡರು ಭಾಗಿಯಾಗಿದ್ದರು.
