ಯಾದಗಿರಿ: ಈಗ ದೇಶದೆಲ್ಲೆಡೆ ಗ್ಯಾಸ್ ಸಿಲಿಂಡರ್ ಗಳದ್ದೇ ಮಾತು.ಸಿಲಿಂಡರ್ ಸಿಗಲ್ವಂತೆ ಅಂದುಕೊಂಡು ಬಹಳಷ್ಟು ಜನ ಮೊದಲೇ ಸಿಲಿಂಡರ್ ಬುಕ್ ಮಾಡುತ್ತಿದ್ದಾರೆ.ಹಾಗಾಗಿ ಗ್ಯಾಸ್ ಸಿಲಿಂಡರ್ ಕೊರತೆ ಕಾಡುತ್ತಿದೆ.
ಇದರ ನಡುವೆ ವ್ಯಾಪಾಸ್ಥರು ವಾಣಿಜ್ಯ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಅಡುಗೆ ಅನಿಲ ಬಳಸುತ್ತಿದ್ದಾರೆ.
ಇದರಿಂದಾಗಿ ಇನ್ನಷ್ಟು ಸಿಲಿಂಡರ್ ಕೊರತೆ ಉಂಟಾಗಿದೆ.ಯಾದಗಿರಿಯಲ್ಲಿ ಅಡುಗೆ ಅನಿಲವನ್ನು ವ್ಯಾಪಾರಸ್ಥರು ಬಳಸುತ್ತಿರುವ ಖಚಿತ ಮಾಹಿತಿ ಮೇರೆಗೆ ಡಿಸಿ ಹರ್ಷಲ್ ಬೋಯರ್ ಮಾರ್ಗದರ್ಶನದಲ್ಲಿ ಗುರುವಾರ ಅಧಿಕಾರಿಗಳ ವಿವಿಧ ತಂಡ ದಾಳಿ ನಡೆಸಿದವು.
ಅಧಿಕಾರಿಗಳು ನಗರದ ಬೇರೆ,ಬೇರೆ ಕಡೆ ದಾಳಿ ಮಾಡಿ ಒಟ್ಟು 45 ಅಡುಗೆ ಅನಿಲ ಸಿಲಿಂಡರ್ ಗನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಹೋಟೆಲ್,ಖಾನಾವಳಿ, ಕೈಗಾಡಿಗಳು,ರಸ್ತೆಬದಿ ವ್ಯಾಪಾರಿಗಳ ಸ್ಥಳಗಳ ಮೇಲೆ ಎಸಿ, ಆಹಾರ ಇಲಾಖೆ ಡಿಡಿ,ತಹಸಿಲ್ದಾರ್, ಶಿರಸ್ತೆದಾರ್,ಎಸಿ ನೇತೃತ್ವದಲ್ಲಿ ವಿವಿಧ ಅಧಿಕಾರಿಗಳ ತಂಡಗಳು ಪ್ರತ್ಯೇಕ ದಾಳಿ ನಡೆಸಿದವು.
ದೂರು ದಾಖಲಿಸಿ ಕೋರ್ಟ್ ಗೆ ಹಾಜರು ಪಡಿಸಲಾಗುವುದೆಂದು ಆಹಾರ ಇಲಾಖೆ ಡಿಡಿ ಸೋಮಶೇಖರ್ ಬಿರಾದಾರ ತಿಳಿಸಿದ್ದಾರೆ.
